ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌ | ‘ಸಲಿಂಗ ವಿವಾಹ ಕಾನೂನುಬದ್ಧ’ ಮಸೂದೆ ಅಂಗೀಕಾರ

Published 27 ಮಾರ್ಚ್ 2024, 12:35 IST
Last Updated 27 ಮಾರ್ಚ್ 2024, 12:35 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಬುಧವಾರ ಥಾಯ್ಲೆಂಡ್‌ ಸಂಸತ್ತು ಅನುಮೋದಿಸಿದೆ. ಈ ಮಸೂದೆಗೆ ರಾಜನಿಂದ ಅಂಗೀಕಾರ ದೊರೆಯಬೇಕಿದೆ. ಇದು ಜಾರಿಗೆ ಬಂದೊಡನೆ, ಯಾವುದೇ ಲಿಂಗದವರು ವಿವಾಹವಾದಲ್ಲಿ ಸಿಗಬೇಕಾದ ಸಮಾನ ಹಕ್ಕುಗಳನ್ನು ಕಾನೂನುಬದ್ಧಗೊಳಿಸಿದ ಮತ್ತು ಸಲಿಂಗ ವಿವಾಹಕ್ಕೆ ಅಧಿಕೃತ ಒಪ್ಪಿಗೆ ನೀಡಿದ ಆಗ್ನೇಯ ಏಷ್ಯಾದ ಮೊದಲ ರಾಷ್ಟ್ರವಾಗಿ ಥಾಯ್ಲೆಂಡ್‌ ಹೊರಹೊಮ್ಮಲಿದೆ. 

ಈಗಾಗಲೇ ಏಷ್ಯಾದ ತೈವಾನ್‌ ಮತ್ತು ನೇಪಾಳ ಈ ಕಾನೂನನ್ನು ಜಾರಿಗೆ ತಂದಿವೆ. ರಾಜನಿಂದ ಮಸೂದೆಗಳು ತಿರಸ್ಕಾರಗೊಳ್ಳುವುದು ಅಪರೂಪ. ಹೀಗಾಗಿ ಈ ಮಸೂದೆಯು ಅಂಗೀಕೃತವಾಗಲಿರುವ ಸಾಧ್ಯತೆಯೇ ಹೆಚ್ಚು.

ಥಾಯ್ಲೆಂಡ್‌ ಸಂಸತ್ತಿನ ಕೆಳಮನೆಯ 415 ಸದಸ್ಯರಲ್ಲಿ 400 ಸದಸ್ಯರು ಮಸೂದೆಗೆ ಒಪ್ಪಿಗೆ ಸೂಚಿಸಿದ್ದಾರೆ. 10 ಜನರು ಮಾತ್ರ ಮಸೂದೆಯ ವಿರುದ್ಧ ಮತ ಚಲಾಯಿಸಿದ್ದರೆ, ಮೂವರು ಮತ ಚಲಾಯಿಸಿಲ್ಲ ಹಾಗೂ ಇಬ್ಬರು ಗೈರುಹಾಜರಾಗಿದ್ದರು. 

ಈ ಮಸೂದೆಯು ಕಾನೂನಾಗಿ ಜಾರಿಗೆ ಬಂದಮೇಲೆ ಪುರುಷ ಮತ್ತು ಮಹಿಳೆ, ಗಂಡ ಮತ್ತು ಹೆಂಡತಿ ಎಂಬ ಲಿಂಗವನ್ನು ಸೂಚಿಸುವ ಪದಗಳನ್ನು ವಿವಾಹ ಪಾಲುದಾರ (ಮ್ಯಾರೇಜ್ ಪಾರ್ಟನರ್‌) ಹಾಗೂ ‘ವ್ಯಕ್ತಿ’ ಎಂಬ ವೈಯಕ್ತಿಕ ಪದಗಳಿಗೆ ಬದಲಾಯಿಸಲು ನಾಗರಿಕ ಮತ್ತು ವಾಣಿಜ್ಯ ಸಂಹಿತೆಗೆ ತಿದ್ದುಪಡಿ ತರುವ ಅವಕಾಶ ಕಲ್ಪಿಸಲಿದೆ. ಅಲ್ಲದೇ ದಂಪತಿಗಳಿಗೆ ಸಂಪೂರ್ಣ ಕಾನೂನು, ವೈದ್ಯಕೀಯ ಮತ್ತು ಆರ್ಥಿಕ ಹಕ್ಕುಗಳನ್ನು ನೀಡುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT