ವಾಷಿಂಗ್ಟನ್: ‘ಜಗತ್ತಿನಲ್ಲಿ55 ಕೋಟಿಯಷ್ಟು ಭಾರತೀಯ ಮೂಲದವರಿದ್ದು,ಅವರ ಪೈಕಿ 200ಕ್ಕೂ ಹೆಚ್ಚು ಮಂದಿ ಉನ್ನತ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಅಮೆರಿಕ ಮೂಲದ ಸಂಸ್ಥೆ ಇಂಡಿಯಾಸ್ಪೊರಾ ತಿಳಿಸಿದೆ.

ಸೋಮವಾರ ನಡೆಯಲಿರುವ ಅಮೆರಿಕದ ಅಧ್ಯಕ್ಷರ ದಿನಾಚರಣೆಯ ಹಿನ್ನೆಲೆಯಲ್ಲಿಇಂಡಿಯಾಸ್ಪೊರಾವು 15 ದೇಶಗಳಲ್ಲಿ 200 ಕ್ಕೂ ಹೆಚ್ಚು ಉನ್ನತ ಸ್ಥಾನಗಳಲ್ಲಿರುವ ಭಾರತೀಯರ ಹೆಸರನ್ನು ಪಟ್ಟಿ ಮಾಡಿದೆ. ಸೋಮವಾರವೇ ಅದನ್ನು ಬಿಡುಗಡೆ ಮಾಡಲಿದೆ.

‘ಈ ಪಟ್ಟಿಗೆ ಭಾರತೀಯ ಮೂಲದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಹೆಸರು ಹೊಸದಾಗಿ ಸೇರ್ಪಡೆಯಾಗಿದೆ. ಈ ಪಟ್ಟಿಯಲ್ಲಿ ಚುನಾಯಿತ ಅಧಿಕಾರಿಗಳು, ನಾಗರಿಕ ಸೇವೆ ಅಧಿಕಾರಿಗಳ ಹೆಸರು ಕೂಡ ಇದೆ. ಈ ಗಣ್ಯರು ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ತಮ್ಮ ನಾಯಕತ್ವದ ಮೂಲಕ ಪರಿಣಾಮ ಬೀರಿದ್ದಾರೆ’ ಎಂದು ಇಂಡಿಯಾಸ್ಪೊರಾದಸ್ಥಾಪಕ ಎಂ.ಆರ್ ರಂಗಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ:ಅಮೆರಿಕ: ಎರಡು ಪ್ರಮುಖ ಹುದ್ದೆಗಳಿಗೆ ಭಾರತೀಯ ಮೂಲದ ತಜ್ಞರ ನೇಮಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.