ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಗಾಸ್ಕರ್‌: ಹಡಗು ಮುಳುಗಿ 64 ಸಾವು, 12 ಗಂಟೆ ಈಜಿ ದಡ ಸೇರಿದ ಸಚಿವ

Last Updated 22 ಡಿಸೆಂಬರ್ 2021, 12:16 IST
ಅಕ್ಷರ ಗಾತ್ರ

ಅಂಟನಾನಾರಿವೊ: ದ್ವೀಪರಾಷ್ಟ್ರ ಮಡಗಾಸ್ಕರ್‌ನ ಈಶಾನ್ಯದ ಕರಾವಳಿ ಸಮುದ್ರದಲ್ಲಿ ಸರಕು ಸಾಗಣೆಯ ಸಣ್ಣ ಹಡಗೊಂದು ಮುಳುಗಿದ್ದು, ಮೃತಪಟ್ಟವರ ಸಂಖ್ಯೆ 64ಕ್ಕೆ ಏರಿದೆ. ಬುಧವಾರ 25 ಮಂದಿಯ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಡಗಿನಲ್ಲಿ ನಿಯಮಬಾಹಿರವಾಗಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿತ್ತು. ಹಡಗಿನಲ್ಲಿ 130 ಜನರಿದ್ದರು. ಮೃತರಲ್ಲಿ ಐವರು ಮಕ್ಕಳೂ ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಐವರು ಪ್ರಯಾಣಿಕರನ್ನು ರಕ್ಷಿಸಲಾಗಿದೆ. 15 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಬದುಕುಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

12 ತಾಸು ಈಜು...

ಈ ಮಧ್ಯೆ, ಅವಘಡ ಸ್ಥಳಕ್ಕೆ ತೆರಳುತ್ತಿದ್ದ ಮಲಗಾಸಿ ಸರ್ಕಾರದ ಸಚಿವರಿದ್ದ ಹೆಲಿಕಾಪ್ಟರ್‌ ಪತನಗೊಂಡಿದೆ. ಸಚಿವರು ಪಾರಾಗಿದ್ದು, 12 ಗಂಟೆ ಕಾಲ ಈಜಿ ತೀರ ಪ್ರದೇಶ ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT