ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡ್ಡಾಯ ಮರಣದಂಡನೆ ರದ್ದು ಮಾಡಿದ ಮಲೇಷ್ಯಾ ಸರ್ಕಾರ

Last Updated 3 ಏಪ್ರಿಲ್ 2023, 14:34 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಮಹತ್ವದ ಕಾನೂನು ಸುಧಾರಣೆಯೊಂದರಲ್ಲಿ ಮಲೇಷ್ಯಾ ಸಂಸತ್ತು, ಹತ್ಯೆ ಸೇರಿದಂತೆ ವಿವಿಧ ಗಂಭೀರ ಅಪರಾಧ ಕೃತ್ಯಗಳಿಗೆ ವಿಧಿಸಲಾಗುತ್ತಿದ್ದ ಮರಣ ದಂಡನೆಯನ್ನು ರದ್ದುಪಡಿಸುವ ಮಸೂದೆಯನ್ನು ಅಂಗೀಕರಿಸಿದೆ. ಅಲ್ಲದೆ, ಸ್ವಾಭಾವಿಕ ಜೀವಾವಧಿ ಶಿಕ್ಷೆಗಳನ್ನು ರದ್ದು ಮಾಡಿದೆ. ಸಂಸತ್ತಿನ ಈ ನಿರ್ಣಯವನ್ನು ಬಲಪಂಥೀಯ ಸಂಘಟನೆಗಳು ಸ್ವಾಗತಿಸಿವೆ.

ಈ ನಿರ್ಣಯದಿಂದಾಗಿ ಸುಮಾರು 1,300 ಕೈದಿಗಳು ಮರಣದಂಡನೆಯಿಂದ ರಿಲೀಫ್ ಪಡೆಯಲಿದ್ದಾರೆ ಎಂದು ವರದಿ ತಿಳಿಸಿದೆ.

2018ರಲ್ಲಿ ಗರಿಷ್ಠ ಶಿಕ್ಷೆಯನ್ನು ರದ್ದು ಮಾಡುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ಅಂದಿನಿಂದಲೂ ಯಾರಿಗೂ ಮರಣದಂಡನೆ ಶಿಕ್ಷೆ ವಿಧಿಸಲಾಗಿರಲಿಲ್ಲ.

ವರ್ಷದ ಬಳಿಕ ವಿವಿಧ ಪಕ್ಷಗಳ ಒತ್ತಡಕ್ಕೆ ಮಣಿದು ಮರಣದಂಡನೆ ರದ್ದು ಮಾಡುವ ನಿರ್ಧಾರದಿಂದ ಹಿಂದೆ ಸರಿದಿತ್ತು. ನ್ಯಾಯಾಲಯಗಳು ವಿವೇಚನೆ ಬಳಸಿ ಮರಣದಂಡನೆ ಬದಲು ಇತರೆ ಶಿಕ್ಷೆ ವಿಧಿಸಬಹುದು ಎಂದು ಅದು ಹೇಳಿತ್ತು.

ಇದೀಗ, ಈ ಹೊಸ ಮಸೂದೆ ಮಂಡಿಸಿದ್ದು, ಗಂಭೀರ ಅಪರಾಧಗಳಲ್ಲಿ ಮರಣದಂಡನೆ ಬದಲಿಗೆ ಮರಣ ದಂಡನೆಗೆ ಬದಲಾಗಿ ಚಾಟಿಯಲ್ಲಿ ಥಳಿಸುವುದು, 30–40 ವರ್ಷ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವನೆ ಇದೆ. ಈ ಹೊಸ ಕಾನೂನು ಈ ಹಿಂದಿನ ಜೀವಾವಧಿ ಜೈಲು ಶಿಕ್ಷೆಗೂ ಪರ್ಯಾಯವಾಗಿರಲಿದೆ.

ದಕ್ಷಿಣ ಏಷ್ಯಾದ ಕೆಲ ರಾಷ್ಟ್ರಗಳು ಗಂಭೀರ ಅಪರಾಧಗಳಿಗೆ ಮರಣದಂಡನೆ ವಿಧಿಸುವ ನಿರ್ಧಾರಕ್ಕೆ ಬಂದಿರುವ ಈ ಸಂದರ್ಭದಲ್ಲೇ ಮಲೇಷ್ಯಾ ಅದರಿಂದ ಹಿಂದೆ ಸರಿದಿದೆ.

ಕಳೆದ ವರ್ಷ ಮಾದಕ ದ್ರವ್ಯ ಅಪರಾಧಗಳಿಗೆ ಸಂಬಂಧಿಸಿದಂತೆ ಸಿಂಗಪುರದಲ್ಲಿ 11 ಅಪರಾಧಿಗಳನ್ನು ನೇಣಿಗೇರಿಸಲಾಗಿತ್ತು. ಮ್ಯಾನ್ಮಾರ್‌ನಲ್ಲೂ ಸಹ ಮಿಲಿಟರಿ ಆಡಳಿತ ವಿರುದ್ಧದ ನಾಲ್ವರು ಹೋರಾಟಗಾರರನ್ನು ಗರಿಷ್ಠ ಶಿಕ್ಷೆಗೆ ಒಳಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT