ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ರಾಯಭಾರಿ ಆದೇಶದಂತೆ ಇಬ್ರಾಹಿಂ ಆಡಳಿತ: ಮೊಯಿಜು ಆರೋಪ

ಮಾಜಿ ಮಾಲ್ದೀವ್ಸ್‌ ಅಧ್ಯಕ್ಷರ ವಿರುದ್ಧ ಹಾಲಿ ಅಧ್ಯಕ್ಷ ಟೀಕೆ
Published 29 ಮಾರ್ಚ್ 2024, 15:28 IST
Last Updated 29 ಮಾರ್ಚ್ 2024, 15:28 IST
ಅಕ್ಷರ ಗಾತ್ರ

ಮಾಲೆ: ಮಾಲ್ದೀವ್ಸ್‌ನ ಮಾಜಿ ಅಧ್ಯಕ್ಷ ಇಬ್ರಾಹಿಂ ಮೊಹಮದ್‌ ಸೊಲಿಹ್‌ ಅವರು ‘ವಿದೇಶಿ ರಾಯಭಾರಿ’ ಆದೇಶದಂತೆ ತಾವು ಕಾರ್ಯನಿರ್ವಹಿಸಿದ್ದಾರೆ ಎಂದು ಹಾಲಿ ಅಧ್ಯಕ್ಷ ಮೊಹಮದ್‌ ಮೊಯಿಜು ಆರೋ‍ಪಿಸಿದ್ದಾರೆ. ಆದರೆ ನಿರ್ದಿಷ್ಟವಾಗಿ ಯಾವ ದೇಶದ ರಾಯಭಾರಿ ಎಂಬುದನ್ನು ಅವರು ಉಲ್ಲೇಖಿಸಿಲ್ಲ. 

ಸಾರ್ವಜನಿಕ ಸೇವಾ ಮಾಧ್ಯಮ (ಪಿಎಸ್‌ಎಮ್‌) ಸಂದರ್ಶನದಲ್ಲಿ ಇತ್ತೀಚೆಗೆ ಮಿಲಿಟರಿ ಡ್ರೋನ್‌ಗಳ ಖರೀದಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಟೀಕೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೊಯಿಜು ‘ವಿಪಕ್ಷ ಎಂಡಿಪಿ 2018ರಿಂದ 2023ರ ಅವಧಿಯಲ್ಲಿ ಅಧಿಕಾರಲ್ಲಿದ್ದಾಗ ಸಂಸತ್ತಿನಲ್ಲಿ ಬಹುಮತವನ್ನು ಹೊಂದಿತ್ತು. ಆದರೂ ಮಾಲ್ದೀವ್ಸ್‌ನ ಸ್ವಾತಂತ್ರ್ಯವನ್ನು ರಕ್ಷಿಸಲು ಪಕ್ಷವು ವಿಫಲವಾಗಿದೆ. ಅದನ್ನು ವಿದೇಶದ ಕೈಯಲ್ಲಿ ಬಿಟ್ಟಿತ್ತು. ಇಬ್ರಾಹಿಂ ಮೊಹಮದ್‌ ಸೊಲಿಹ್‌ ಅವರು ವಿದೇಶಿ ರಾಯಭಾರಿ ಆದೇಶದಂತೆ ಕಾರ್ಯನಿರ್ವಹಿಸಿದರು ಮತ್ತು ಇದರಿಂದ ದೇಶದ ವ್ಯಾಪಕ ಹಾನಿಗೆ ಕಾರಣವಾಯಿತು’ ಎಂದು ಆರೋಪಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT