ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊ: ಬಸ್‌ ಅಪಘಾತದಲ್ಲಿ 18 ಮಂದಿ ಸಾವು

Published 29 ಏಪ್ರಿಲ್ 2024, 12:46 IST
Last Updated 29 ಏಪ್ರಿಲ್ 2024, 12:46 IST
ಅಕ್ಷರ ಗಾತ್ರ

ಮೆಕ್ಸಿಕೊ: ಮೆಕ್ಸಿಕೊದಲ್ಲಿ ಭೀಕರ ಬಸ್‌ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 18 ಜನರು ಸಾವ‌ನ್ನಪ್ಪಿದ್ದಾರೆ. ಅಲ್ಲದೇ ಇತರ 32 ಜನರು ಗಾಯಗೊಂಡಿದ್ದಾರೆ ಎಂದು ಮೆಕ್ಸಿಕೊದ ನಾಗರಿಕ ರಕ್ಷಣಾ ಸಮಿತಿ ತಿಳಿಸಿದೆ. ಮೆಕ್ಸಿಕೊ ರಾಜ್ಯದ ದಕ್ಷಿಣ ಪ್ರದೇಶದ ಮಲಿನಾಲ್ಕೊದಲ್ಲಿ ಈ ಅಪಘಾತ ಸಂಭವಿಸಿದೆ.

ಗುವಾನಾಜುವಾಟೊದ ಸ್ಯಾನ್‌ ಲೂಯಿಸ್‌ ಡೆ ಲಾ ಪಾಜ್‌ನಿಂದ ಚಾಲ್ಮಾಗೆ ಹೋಗುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಬಸ್‌ ಪಲ್ಟಿಯಾಗಿದೆ. 14 ಜನರು ಸ್ಥಳದಲ್ಲೇ ಮೃತಪಟ್ಟಿದ್ದರೆ, ನಾಲ್ವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮೆಕ್ಸಿಕೊ ಭದ್ರತಾ ಕಾರ್ಯದರ್ಶಿ ತಿಳಿಸಿದ್ದಾರೆ. 

ಅಪಘಾತದಲ್ಲಿ ಗಾಯಗೊಂಡವರಿಗೆ ಅವರ ಸಂಬಂಧಿಕರು ನೀರು ಮತ್ತು ಹೊದಿಕೆಗಳನ್ನು ನೀಡುತ್ತಿರುವ ದೃಶ್ಯಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT