ಇಟಲಿಯ ಆಗಸ ಅಕ್ಷರಶಃ ಬೆಂಕಿಮಯವಾಗಿತ್ತು. ಜೀವಂತ ಜ್ವಾಲಾಮುಖಿ ಮೌಂಟ್ ಎಟ್ನಾ ಚಿಮ್ಮುತ್ತಿದ್ದ ಬೆಂಕಿಉಂಡೆಗಳು,ಬೂದಿ ಆಗಸವನ್ನು ಆವರಿಸಿದ್ದವು. ಕೊತ ಕೊತ ಕುದಿಯುತ್ತಿದ್ದ ಜ್ವಾಲಾಮುಖಿ ತನ್ನ ಒಡಲಿಂದ ಲಾವಾರಸವನ್ನು ಉಗುಳಿದೆ. ಎಟ್ನಾ ಜ್ವಾಲಾಮುಖಿಯ ರೌದ್ರಾವತಾರದ ವಿಡಿಯೋ ವೈರಲ್ ಆಗಿದೆ.

ಸಿಸಿಲಿಯ ಮೆಡಿಟೇರಿಯನ್ ದ್ವೀಪದಲ್ಲಿರುವ ಈ ಜ್ವಾಲಾಮುಖಿ ಆಗಾಗ್ಗೆ ಬೆಂಕಿ ಉಗುಳುತ್ತಿರುತ್ತದೆ. ಇದೀಗ, ಲಾವಾ ರಸದ ನದಿ ಹರಿಯುತ್ತಿದೆ.

ದಿ ಸನ್ ವರದಿ ಪ್ರಕಾರ, ಎಟ್ನಾ ಜ್ವಾಲಾಮುಖಿ ಉಗುಳಿದ ಲಾವಾ ರಸ 100 ಮೀಟರ್ ಅಗಲ, ಬೂದಿ, ಬೆಂಕಿ 3ಕಿ.ಮೀ ಎತ್ತರದವರೆಗೂ ಆವರಿಸಿದ್ದವು.

ಇಟಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಜಿಯೋಫಿಸಿಕ್ಸ್ ಮತ್ತು ವಲ್ಕ್ಯಾನಾಲಜಿಯ ಜ್ವಾಲಾಮುಖಿ ತಜ್ಞ ಬೋರಿಸ್ ಬೆಹ್ನ್ಕೆ ಈ ಸ್ಫೋಟಕ್ಕೆ ಸಾಕ್ಷಿಯಾಗಿದ್ದಾರೆ ಎಂದು ದಿ ಮೆಟ್ರೋ ವರದಿ ಮಾಡಿದೆ. ಜ್ವಾಲಾಮುಖಿಯ ವಿಡಿಯೋ ಚಿತ್ರೀಕರಿಸಿದ ಬೋರಿಸ್ ಟ್ವಿಟ್ಟರಲ್ಲಿ ಪೋಸ್ಟ್ ಮಾಡಿದ್ದಾರೆ.

ಜ್ವಾಲಾಮುಖಿ ಚಿಮ್ಮುವುದಕ್ಕೂ ಮುನ್ನ ಮೆಡಿಟೇರಿಯನ್ ದ್ವೀಪದಲ್ಲಿ 2.7 ತೀವ್ರತೆಯ ಭೂಕಂಪ ಸಂಭವಿಸಿದೆ. 459 ಚದರ ಮೈಲಿ ವ್ಯಾಪಿಸಿರುವ ಈ ಜ್ವಾಲಾಮುಖಿ, 10,992 ಅಡಿ ಎತ್ತರಕ್ಕೆ ಚಿಮ್ಮಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.