ವಾಷಿಂಗ್ಟನ್: 2008ರ ಮುಂಬೈ ದಾಳಿ ಸಂಚುಕೋರ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವುರ್ ಹುಸೇನ್ ರಾಣಾ, ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾನೆ.

ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿ ಆತನ ಪರ ವಕೀಲ ಜಾಕ್ವೆಲಿನ್ ಚೆಲೊನಿಯನ್ ಅವರು ಕಳೆದ ವಾರ ಲಾಸ್‌ಏಂಜಲೀಸ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

‘ಈಗಾಗಲೇ ರಾಣಾನನ್ನು ಅಪರಾಧಗಳಿಂದ ಖುಲಾಸೆಗೊಳಿಸಲಾಗಿದೆ. ಅಮೆರಿಕ – ಭಾರತ ಹಸ್ತಾಂತರ ಒಪ್ಪಂದದ 6ನೇ ಪರಿಚ್ಛೇದದ ಪ್ರಕಾರ, ರಾಣಾನನ್ನು ಹಸ್ತಾಂತರಿಸುವುದನ್ನು ನಿರ್ಬಂಧಿಸಲಾಗಿದೆ. 9ನೇ ಪರಿಚ್ಛೇದದ ಪ್ರಕಾರ ಹಸ್ತಾಂತರಿಸಲು ರಾಣಾ ಮಾಡಿರಬಹುದಾದ ಸಂಭವನೀಯ ಅಪರಾಧಗಳ ಸಾಕ್ಷ್ಯವನ್ನು ಒದಗಿಸಿಲ್ಲ‘ಎಂದು ವಕೀಲರು ವಾದ ಮಂಡಿಸಿದ್ದರು.

ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಅಮೆರಿಕ ಸರ್ಕಾರ ಶೀಘ್ರದಲ್ಲೇ ಗೊತ್ತುವಳಿ ಮಂಡಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.