ವಿಶ್ವಸಂಸ್ಥೆ: ಅಲಿಪ್ತ ಕೂಟದ (ಎನ್‌ಎಎಮ್) ದೇಶಗಳ ಸಭೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನ ನಿಲುವಿಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

ವೆನಿಜುವೆಲ ರಾಜಧಾನಿ ಕಾರಕಸ್‌ನಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ಸಂಪುಟ ಸಭೆಯಲ್ಲಿ ಪಾಕ್‌ನ ಈ ನಡೆಯನ್ನು ಭಾರತ ಖಂಡಿಸಿದೆ. ಇದು‘ಸ್ವಹಿತಾಸಕ್ತಿಯ ಧೋರಣೆ’ ಆಗಿದ್ದು, ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ‘ಗಾಳಿ ಹಿಡಿಯುವ ಸಾಹಸಕ್ಕೆ’ ಮುಂದಾಗಿದೆ ಎಂದು ಜರಿದಿದೆ.

ಜವಾಬ್ದಾರಿಯುತವಾಗಿ ವರ್ತಿಸಬೇಕಾದ ದೇಶ ಒಕ್ಕೂಟದ ಆಶಯಗಳನ್ನು ಉಲ್ಲಂಘಿಸಿ ಪ್ರಾದೇಶಿಕ ಸಮಸ್ಯೆಯನ್ನು ಮುನ್ನಲೆಗೆ ತರುತ್ತಿದೆ. ಭಯೋತ್ಪಾದನೆ, ಹವಾಮಾನ ವೈಪರೀತ್ಯ ಸಮಸ್ಯೆಗಳನ್ನು ಜಗತ್ತು ಎದುರಿಸುತ್ತಿದೆ. ಇವುಗಳ ಬಗ್ಗೆ ಅದು ಗಮನ ಹರಿಸಲಿ ಎಂದುವಿಶ್ವಸಂಸ್ಥೆಯಲ್ಲಿರುವ ಭಾರತದ ರಾಯಭಾರಿ ಸೈಯದ್ಅಕ್ಬರುದ್ದೀನ್ ಪಾಕ್ ಹೆಸರೆತ್ತದೆ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.