ವಿಂಡ್ಹೋಕ್: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ನಮೀಬಿಯಾ ಅಧ್ಯಕ್ಷ ಹಾಗೆ ಜಿಂಗೋಬ್ (82) ಅವರು ಭಾನುವಾರ ‘ವಿಶ್ವ ಕ್ಯಾನ್ಸರ್ ದಿನ’ವೇ ನಿಧನರಾಗಿದ್ದಾರೆ.
ಜಿಂಗೋಬ್ ಅವರಿಗೆ ಪತ್ನಿ ಮೋನಿಕಾ ಜಿಂಗೋಸ್ ಮತ್ತು ಮಕ್ಕಳು ಇದ್ದಾರೆ.
ಸ್ವಾತಂತ್ರ್ಯ ನಂತರದ ನಮೀಬಿಯಾದ ಮೊದಲ ಪ್ರಧಾನಿಯಾಗಿದ್ದ ಜಿಂಗೋಬ್ ಅವರು ಎರಡನೇ ಬಾರಿಗೆ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳು ನಿಯಮಿತ ವೈದ್ಯಕೀಯ ತಪಾಸಣೆಗೆ ಒಳಗಾದಾಗ ಅವರಿಗೆ ಕ್ಯಾನ್ಸರ್ ಕಾಯಿಲೆ ಇರುವುದು ಪತ್ತೆಯಾಗಿತ್ತು ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಂಡ್ಹೋಕ್‌ನ ಲೇಡಿ ಪೊಹಂಬಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವಾಗಲೇ ನಿಧನರಾಗಿದ್ದಾರೆ. 2013ರಲ್ಲಿ ಜಿಂಗೋಬ್ ಅವರಿಗೆ ಮಿದುಳು ಶಸ್ತ್ರ ಚಿಕಿತ್ಸೆ ಕೂಡ ಆಗಿತ್ತು.