ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾ: ಅಪಹರಿಸಲಾಗಿದ್ದ 300 ಶಾಲಾ ಮಕ್ಕಳ ಬಿಡುಗಡೆ

Published 24 ಮಾರ್ಚ್ 2024, 14:02 IST
Last Updated 24 ಮಾರ್ಚ್ 2024, 14:02 IST
ಅಕ್ಷರ ಗಾತ್ರ

ಅಬುಜಾ (ನೈಜೀರಿಯಾ): ನೈಜೀರಿಯಾದ ವಾಯುವ್ಯ ರಾಜ್ಯವಾದ ಕಡುನಾದಲ್ಲಿ ಅಪಹರಿಸಲಾಗಿದ್ದ 300 ಶಾಲಾ ಮಕ್ಕಳನ್ನು ಎರಡು ವಾರಗಳ ನಂತರ ಬಿಡುಗಡೆ ಮಾಡಲಾಗಿದೆ. 

2014ರಿಂದ ಈವರೆಗೆ ನೈಜೀರಿಯಾದ ಶಾಲೆಗಳಿಂದ ಕನಿಷ್ಠ 1,400 ಮಕ್ಕಳನ್ನು ಅಪಹರಿಸಲಾಗಿದೆ. ಬೋಕೋ ಹರಾಮ್‌ ಉಗ್ರಗಾಮಿಗಳು ಬೊರ್ನೊದ ಚಿಕ್‌ಬೊಕ್ ಗ್ರಾಮದ ನೂರಾರು ಶಾಲಾ ಬಾಲಕಿಯರನ್ನು ಅಪಹರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೇಶದ ವಾಯುವ್ಯ ಮತ್ತು ಮಧ್ಯ ಭಾಗಗಳಲ್ಲಿ ಹೆಚ್ಚಿನ ಅಪಹರಣಗಳು ನಡೆಯುತ್ತಿವೆ. ಈ ಪ್ರದೇಶಗಳಲ್ಲಿ ಹತ್ತಾರು ಸಶಸ್ತ್ರ ಗುಂಪುಗಳು ಗ್ರಾಮಸ್ಥರು ಹಾಗೂ ಪ್ರಯಾಣಿಕರ ಬಳಿ ಸುಲಿಗೆ ಮಾಡುತ್ತವೆ. 

ಸೊಕೊಟೊ ರಾಜ್ಯದಲ್ಲಿ ಕನಿಷ್ಠ 17 ಶಾಲಾ ಮಕ್ಕಳನ್ನು ಅಪಹರಿಸಿದ ಎರಡು ವಾರಗಳ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಶನಿವಾರ  ಸೊಕೊಟೊ ರಾಜ್ಯ ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT