ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ: ನೆಲ್ಸನ್ ಮಂಡೇಲಾ ಫೌಂಡೇಷನ್‌ ಸಿಇಒ ವಜಾ

Published 29 ಜೂನ್ 2023, 11:49 IST
Last Updated 29 ಜೂನ್ 2023, 11:49 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ನೆಲ್ಸನ್ ಮಂಡೇಲಾ ಫೌಂಡೇಷನ್‌ (ಎನ್‌ಎಂಎಫ್‌) ಮಂಡಳಿ, ತನ್ನ ಸಿಇಒ ಸೆಲ್ಲೊ ಹಟಾಂಗ್ (Sello Hatang) ಅವರನ್ನು ಸೇವೆಯಿಂದ ವಜಾಗೊಳಿದೆ. ಕೆಲವು ಉದ್ಯೋಗಿಗಳು ನೀಡಿದ ದೂರಿನ ತನಿಖೆಯ ನಂತರ ಈ ಕ್ರಮ ಕೈಗೊಂಡಿದೆ.

‘ನಮ್ಮನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ. ಸ್ವೀಕಾರಾರ್ಹವಲ್ಲದ ವರ್ತನೆ ತೋರುತ್ತಾರೆ’ ಎಂದು ಉದ್ಯೋಗಿಗಳು ಸಿಇಒ ವಿರುದ್ಧ ಮಂಡಳಿಗೆ ಹಿಂದಿನ ತಿಂಗಳು ದೂರು ನೀಡಿದ್ದರು.

ದೂರು ದಾಖಲಾದ ಬೆನ್ನಿಗೆ ಸಿಇಒ ರಾಜೀನಾಮೆಯನ್ನು ಪಡೆದು ವಿಶೇಷ ರಜೆ ಮಂಜೂರು ಮಾಡಿದ್ದ ಮಂಡಳಿ, ತನಿಖೆಗಾಗಿ ಸ್ವತಂತ್ರ ಸಮಿತಿ ರಚಿಸಿತ್ತು. ಇದೀಗ ಹಟಾಂಗ್ ವಜಾಗೊಳಿಸಿರುವ ಪ್ರಕಟಣೆಯನ್ನು ಬುಧವಾರ ಬಿಡುಗಡೆ ಮಾಡಿದೆ. ಇದರಲ್ಲಿ ಬೇರೆ ಯಾವ ಮಾಹಿತಿಯನ್ನು ನೀಡಿಲ್ಲ.

ಶೀಘ್ರದಲ್ಲೇ ಹೊಸ ಸಿಇಒ ನೇಮಕ ನಡೆಯಲಿದೆ ಎಂದು ಮಂಡಳಿ ತಿಳಿಸಿದೆ. ನೆಲ್ಸನ್‌ ಮಂಡೇಲಾ ಸ್ಥಾಪಿಸಿದ ಈ ಮಂಡಳಿಗೆ ಭಾರತ ಸರ್ಕಾರವೂ ಸಹಕಾರ ಒದಗಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT