ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೇಪಾಳ: ಮತ್ತೆ ವಿಶ್ವಾಸಮತ ಗೆದ್ದ ಪುಷ್ಪ ಕಮಲ್‌ ದಹಲ್ ಪ್ರಚಂಡ

Published 20 ಮೇ 2024, 13:40 IST
Last Updated 20 ಮೇ 2024, 13:40 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳ ಪ್ರಧಾನಿ ಪುಷ್ಪ ಕಮಲ್‌ ದಹಲ್ ‘ಪ್ರಚಂಡ’ ಅವರು ಸೋಮವಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಅಧಿಕಾರ ವಹಿಸಿಕೊಂಡ 18 ತಿಂಗಳಲ್ಲಿ ನಾಲ್ಕು ಬಾರಿ ವಿಶ್ವಾಸಮತ ಪರೀಕ್ಷೆ ಎದುರಿಸಿದಂತಾಯಿತು.

ಸಂಸತ್ತಿನ 275 ಮಂದಿ ಸದಸ್ಯರ ಪೈಕಿ 157 ಮಂದಿ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ನೇಪಾಳದ ನಾಯಕ ಪ್ರಚಂಡ ಅವರ ನೇತೃತ್ವದ ಸರ್ಕಾರದ ಪರವಾಗಿ ಮತ ಚಲಾಯಿಸಿದರು.

ಪ್ರಮುಖ ವಿರೋಧ ಪಕ್ಷ ನೇಪಾಳಿ ಕಾಂಗ್ರೆಸ್‌ ಮತದಾನವನ್ನು ಬಹಿಷ್ಕರಿಸಿ, ಉಪಪ್ರಧಾನಿ ಮತ್ತು ಗೃಹ ಸಚಿವ ರವಿ ಲಾಮಿಚ್ಛಾನೆ ವಿರುದ್ಧ ಘೋಷಣೆ ಕೂಗಿತು. ಇದರಿಂದ ಕಲಾಪವು ವಿಳಂಬವಾಯಿತು. ಸ್ಪೀಕರ್‌ ದೇವ್‌ ರಾಜ್‌ ಘಿಮಿರೆ, ಪ್ರಚಂಡ ಅವರು ವಿಶ್ವಾಸ ಮತ ಗೆದ್ದಿರುವುದಾಗಿ ಘೋಷಿಸಿದರು. 

ಜನತಾ ಸಮಾಜವಾದಿ ಪಕ್ಷವು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದ ಕಾರಣ ಪ್ರಚಂಡ ಅವರಿಗೆ ವಿಶ್ವಾಸಮತ ಸಾಬೀತು ಮಾಡುವ ಸವಾಲು ಎದುರಾಗಿತ್ತು. ಪ್ರಚಂಡ ಅವರ ಸರ್ಕಾರಕ್ಕೆ ಕನಿಷ್ಠ 138 ಸದಸ್ಯರ ಬೆಂಬಲ ಅಗತ್ಯವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT