ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ದಾಖಲೆ ತಿರುಚಿದ ನೇಪಾಳಿ ಸಂಸದನ ಬಂಧನ 

Published 10 ಆಗಸ್ಟ್ 2023, 17:33 IST
Last Updated 10 ಆಗಸ್ಟ್ 2023, 17:33 IST
ಅಕ್ಷರ ಗಾತ್ರ

ಕಠ್ಮಂಡು: ಶೈಕ್ಷಣಿಕ ದಾಖಲೆ ತಿರುಚಿದ ಆರೋಪದ ಮೇಲೆ ನೇಪಾಳದ ಆಡಳಿತಾರೂಢ ‘ನೇಪಾಳಿ ಕಾಂಗ್ರೆಸ್‌ ಪಕ್ಷ’ದ ಸಂಸದ ಸುನಿಲ್‌ ಶರ್ಮ ಅವರನ್ನು ಕೇಂದ್ರ ತನಿಖಾ ದಳ (ಸಿಐಬಿ)ದ ಪೊಲೀಸರು ಕಠ್ಮಂಡುವಿನಲ್ಲಿ ಗುರುವಾರ ಬಂಧಿಸಿದ್ದಾರೆ.  

ಶರ್ಮ ಅವರ 10+ ತರಗತಿಯ ಪ್ರಮಾಣ ಪತ್ರ ನಕಲಿ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.  

ಮೊರಂಗ್‌–3 ಕ್ಷೇತ್ರದಿಂದ ಶರ್ಮ ಅವರು ಜನಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದರು. ನೇಪಾಳಿ ಕಾಂಗ್ರೆಸ್‌ನ ಹಿರಿಯ ನಾಯಕ ಶೇಖರ್‌ ಕೊಯಿರಾಲ ಅವರ ಬಣದಲ್ಲಿ ಶರ್ಮ ಗುರುತಿಸಿಕೊಂಡಿದ್ದರು. ಬಂಧನದ ಬಗ್ಗೆ ಸ್ಪೀಕರ್‌ಗೆ ಮಾಹಿತಿ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT