ವಿಯೆನ್ನಾ: ‘ಇರಾನ್ನ ನಟಾನ್ಜ್ನಲ್ಲಿರುವ ನೆಲದಡಿಯಲ್ಲಿನ ಪರಮಾಣು ಘಟಕದ ಮೇಲೆ ದಾಳಿ ನಡೆಯುವ ಯಾವುದೇ ಸುಳಿವು ಸಿಕ್ಕಿರಲಿಲ್ಲ’ ವಿಶ್ವಸಂಸ್ಥೆಯ ಅಣ್ವಸ್ತ್ರ ನಿಗಾಸಂಸ್ಥೆ ತಿಳಿಸಿದೆ.

ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಆರೋಪಿಸಿ, ಇರಾನ್ನ ಪರಮಾಣು ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್ ಕಳೆದ ವಾರ ದಾಳಿ ನಡೆಸಿತ್ತು. ಇಸ್ರೇಲ್ನ ಆರೋಪವನ್ನು ಇರಾನ್ ಮೊದಲಿನಿಂದಲೂ ತಳ್ಳಿ ಹಾಕುತ್ತಿದೆ.

ಈ ಕುರಿತು ವಿಶೇಷ ಸಭೆ ನಡೆಸಿದ ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯ (ಐಎಇಎ) ಮುಖ್ಯಸ್ಥ ರಫೇಲ್ ಗ್ರೊಸ್ಸಿ, ‘ಶುಕ್ರವಾರದ ಬಳಿಕ ನಟಾನ್ಜ್ನ ಮೇಲೆ ಹೆಚ್ಚುವರಿಯಾಗಿ ಯಾವುದೇ ಹಾನಿ ಉಂಟಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಟಾನ್ಜ್ ಕೇಂದ್ರದ ಹೊರಭಾಗದಲ್ಲಿ ವಿಕಿರಣಗಳ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಹಜ ಪ್ರಮಾಣದಲ್ಲಿದೆ. ಬಾಹ್ಯ ವಿಕಿರಣ ಪರಿಣಾಮವು ಬೀರಿಲ್ಲ’ ಎಂದು ಗ್ರೊಸ್ಸಿ ತಿಳಿಸಿದರು.

‘ಕೇಂದ್ರದ ಮೇಲೆ ದಾಳಿ ನಡೆಯುವ ಕುರಿತು ಯಾವುದೇ ಮುನ್ಸೂಚನೆ ಇರಲಿಲ್ಲ’ ಎಂದು ಐಎಇಎ ಪ್ರಕಟಣೆಯಲ್ಲಿ ತಿಳಿಸಿದೆ.

‘ನಟಾನ್ಜ್ ಕೇಂದ್ರದ ಮೇಲೆ ಇಸ್ರೇಲ್ ಮೇಲೆ ದಾಳಿ ನಡೆಸಿರುವುದನ್ನು ಕಟುವಾಗಿ ಖಂಡಿಸಿ, ಅದಕ್ಕೆ ಜವಾಬ್ದಾರರನ್ನಾಗಿ ಮಾಡಬೇಕು’ ಎಂದು ಐಎಇಎನ ಇರಾನ್ ರಾಯಭಾರಿ ರೆಜಾ ನಜಾಫಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.