ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಬೆಲ್ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್‌ ಪತಿ ಅಸರ್ ಮಲಿಕ್ ಯಾರು?

Last Updated 10 ನವೆಂಬರ್ 2021, 7:27 IST
ಅಕ್ಷರ ಗಾತ್ರ

ಲಂಡನ್: ನೊಬೆಲ್ ಪುರಸ್ಕೃತ ಮಲಾಲಾ ಯೂಸುಫ್‌ಜಾಯ್‌ ಅವರು ಅಸರ್ ಎಂಬುವವರನ್ನು ಮದುವೆಯಾಗಿರುವುದಾಗಿ ಮಂಗಳವಾರ ರಾತ್ರಿ ಟ್ವೀಟ್‌ ಮಾಡಿದ್ದರು. ಆದರೆ ಪತಿಯ ಬಗ್ಗೆ ಹೆಚ್ಚಿನ ವಿವರ ಬಹಿರಂಗಪಡಿಸಿರಲಿಲ್ಲ.

ಮಲಾಲಾ ಮದುವೆಯಾಗಿರುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಯನ್ನು ಎಂದು ಹಲವು ಮಾಧ್ಯಮಗಳು ಈಗಾಗಲೇ ವರದಿ ಮಾಡಿದ್ದರೂ ಅದು ದೃಢಪಟ್ಟಿರಲಿಲ್ಲ. ಇದೀಗ ಈ ವಿಚಾರ ಖಚಿತವಾಗಿದೆ. ಮಲಾಲ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಉನ್ನತ ಅಧಿಕಾರಿ ಅಸರ್ ಮಲಿಕ್ ಅವರನ್ನೇ ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಲಿಕ್ ಅವರು ಎರಡು ವರ್ಷಗಳ ಹಿಂದೆ ಲಾಹೋರ್‌ನಲ್ಲಿರುವ ಪಿಸಿಬಿಯ ‘ಹೈ ಪರ್ಫಾರ್ಮೆನ್ಸ್‌ ಸೆಂಟರ್‌’ನಲ್ಲಿ ಮ್ಯಾನೇಜರ್ ಆಗಿ ಸೇರಿಕೊಂಡಿದ್ದಾರೆ. ಬಳಿಕ ಅವರ ಕಠಿಣ ಪರಿಶ್ರಮ ಹಾಗೂ ಉತ್ತಮ ಕೆಲಸವನ್ನು ಗುರುತಿಸಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ ನೀಡಲಾಗಿತ್ತು ಎಂದು ಪಿಸಿಬಿ ಮೂಲಗಳು ಹೇಳಿವೆ.

ಬರ್ಮಿಂಗ್‌ಹ್ಯಾಂನ ನಿವಾಸದಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮಲಾಲಾ ಹಾಗೂ ಅಸರ್ ವಿವಾಹ ನೆರವೇರಿತ್ತು.

‘ಇದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನ. ಅಸರ್ ಮತ್ತು ನಾನು ವಿವಾಹವಾಗಿದ್ದು, ಜೀವನ ಸಂಗಾತಿಗಳಾಗಿದ್ದೇವೆ. ಬರ್ಮಿಂಗ್‌ಹ್ಯಾಂನ ನಿವಾಸದಲ್ಲಿ ನಮ್ಮ ಕುಟುಂಬದವರ ಉಪಸ್ಥಿತಿಯಲ್ಲಿ ವಿವಾಹ ನೆರವೇರಿದೆ. ನಿಮ್ಮೆಲ್ಲರ ಹಾರೈಕೆಗಳಿರಲಿ’ ಎಂದು ಮಲಾಲಾ ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT