ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಬೆಲ್ ಪ್ರಶಸ್ತಿ ಮೊತ್ತ ಹೆಚ್ಚಳ

ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಮೊತ್ತವನ್ನು ನೊಬೆಲ್ ಫೌಂಡೇಶನ್ ಹೆಚ್ಚಳ ಮಾಡಿದೆ.
Published 15 ಸೆಪ್ಟೆಂಬರ್ 2023, 11:25 IST
Last Updated 15 ಸೆಪ್ಟೆಂಬರ್ 2023, 11:25 IST
ಅಕ್ಷರ ಗಾತ್ರ

ಸ್ಟಾಕ್ಹೋಮ್: ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಮೊತ್ತವನ್ನು ನೊಬೆಲ್ ಫೌಂಡೇಶನ್ ಹೆಚ್ಚಳ ಮಾಡಿದೆ.

ಪ್ರಶಸ್ತಿ ಮೊತ್ತವನ್ನು 10 ಮಿಲಿಯನ್ ಸ್ವೀಡಿಶ್ ಕ್ರೌನ್‌ನಿಂದ 11 ಮಿಲಿಯನ್ ಸ್ವೀಡಿಶ್ ಕ್ರೌನ್‌ಗೆ ಹೆಚ್ಚಳ ಮಾಡಲಾಗಿದೆ. ಅಂದರೆ ಪ್ರಶಸ್ತಿ ಪುರಸ್ಕೃತರು ಭಾರತೀಯ ರೂಪಾಯಿಯಲ್ಲಿ ₹ 8.19 ಕೋಟಿ ಪಡೆಯಲಿದ್ದಾರೆ.

ಪ್ರಶಸ್ತಿ ಮೊತ್ತದ ಹೆಚ್ಚಳ ನಿರ್ಧಾರವು ಫೌಂಡೇಶನ್‌ನ ಹಣಕಾಸು ದಕ್ಷತೆ ಹೆಚ್ಚಾಗಿರುವುದನ್ನು ತೋರಿಸುತ್ತದೆ ಎಂದು ನೊಬೆಲ್ ಫೌಂಡೇಶನ್ ಶುಕ್ರವಾರ ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಫೌಂಡೇಶನ್‌ ಹಣಕಾಸು ಸಾಮರ್ಥ್ಯ ಕುಸಿದಾಗ ಪ್ರಶಸ್ತಿ ಮೊತ್ತ ಏರಿಳಿತ ಕಂಡಿದೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಮೊತ್ತಕ್ಕೆ ಹೆಚ್ಚಿಸಲಾಗಿದೆ.

2010 ರಲ್ಲಿ ಪ್ರಶಸ್ತಿ ಮೊತ್ತವನ್ನು 10 ಮಿಲಿಯನ್ ಸ್ವೀಡಿಶ್ ಕ್ರೌನ್‌ನಿಂದ 8 ಮಿಲಿಯನ್ ಸ್ವೀಡಿಶ್ ಕ್ರೌನ್‌ಗೆ ಇಳಿಸಲಾಗಿತ್ತು. 2017 ರಲ್ಲಿ 9 ಮಿಲಿಯನ್ ಸ್ವೀಡಿಶ್ ಕ್ರೌನ್‌ಗೆ, 2020 ರಲ್ಲಿ 10 ಮಿಲಿಯನ್ ಸ್ವೀಡಿಶ್ ಕ್ರೌನ್‌ಗೆ ಹೆಚ್ಚಳ ಮಾಡಲಾಗಿತ್ತು.

ಅದಾಗ್ಯೂ ಇತ್ತೀಚಿನ ದಶಕಗಳಲ್ಲಿ ಯುರೊ ಎದುರು ಸ್ವೀಡಿಶ್ ಕ್ರೌನ್‌ ಶೇ 30 ರಷ್ಟು ಮೌಲ್ಯವನ್ನು ಕಳೆದುಕೊಂಡಿರುವುದರಿಂದ ಸ್ವೀಡಿಶ್ ಹೊರತುಪಡಿಸಿ ಹೊರಗಿನವರಿಗೆ ಮೊತ್ತ ಹೆಚ್ಚಳದ ಲಾಭ ದಕ್ಕುವುದಿಲ್ಲ. ಅಕ್ಟೋಬರ್‌ನಲ್ಲಿ 2023ರ ನೊಬೆಲ್ ಪ್ರಶಸ್ತಿಗಳು ಪ್ರಕಟಗೊಳ್ಳುತ್ತವೆ ಎಂದು ಫೌಂಡೇಶನ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT