ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೆರೊಲಿನಾದಲ್ಲಿ ಹಿಂದೂ ದೇಗುಲದ 87 ಅಡಿ ಗೋಪುರ ಉದ್ಘಾಟನೆ

Last Updated 28 ಅಕ್ಟೋಬರ್ 2022, 12:28 IST
ಅಕ್ಷರ ಗಾತ್ರ

ನ್ಯೂಯಾರ್ಕ್:ಈ ವರ್ಷದ ದೀಪಾವಳಿ ಹಬ್ಬ ಉತ್ತರ ಕೆರೊಲಿನಾದ ಹಿಂದೂ ಸಮುದಾಯಕ್ಕೆ ವಿಶೇಷವಾಗಿತ್ತು. ಅ. 24ರಂದು ಇಲ್ಲಿನ ಅತಿದೊಡ್ಡ ವೆಂಕಟೇಶ್ವರ ದೇವಾಲಯದಲ್ಲಿ 87 ಅಡಿಯ ಗೋಪುರವನ್ನು ಉದ್ಘಾಟಿಸಲಾಗಿದೆ.ಇದನ್ನು ದೇವರ ದರ್ಶನಕ್ಕಾಗಿ ಇರುವ ‘ಭವ್ಯ ಪ್ರವೇಶದ್ವಾರ’ ಎಂದು ವರ್ಣಿಸಲಾಗಿದೆ.

‘ಏಕತೆ ಮತ್ತು ಸಮೃದ್ಧಿಯ ಗೋಪುರ’ ಎಂದು ಕರೆಯಲ್ಪಡುವ ಈ ಗೋಪುರವನ್ನು ಗವರ್ನರ್ ಗ್ಯಾರಿ ಕೂಪರ್ ಉದ್ಘಾಟಿಸಿದರು.

2020 ರಲ್ಲಿ ಕೋವಿಡ್‌ ಸಾಂಕ್ರಾಮಿಕದ ಪ್ರಾರಂಭದಲ್ಲಿ ಗೋಪುರದ ನಿರ್ಮಾಣ ಆರಂಭಿಸಲಾಯಿತು ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿನಾರಾಯಣನ್ ಶ್ರೀನಿವಾಸನ್ ಹೇಳಿದ್ದಾರೆ ಎಂದು ಸ್ಥಳೀಯ ಸುದ್ದಿ ಮಾಧ್ಯಮ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT