ಸೋಲ್: ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೆ ಮಯುಂಗ್ ಅವರ ಚೀನಾ ಭೇಟಿಗೆ ಕೆಲವೇ ಗಂಟೆಗಳ ಮೊದಲು, ಉತ್ತರ ಕೊರಿಯಾವು ಸಮುದ್ರದ ಕಡೆಗೆ ಹಲವು ಖಂಡಾಂತರ ಕ್ಷಿಪಣಿಗಳನ್ನು ಉಡಾವಣೆ ಮಾಡಿದ್ದು, ಶಸ್ತ್ರಾಸ್ತ್ರ ಬಲವನ್ನು ಪ್ರದರ್ಶಿಸುವ ಯತ್ನ ನಡೆಸಿದೆ.

ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಜತೆಗೆ ದಕ್ಷಿಣ ಕೊರಿಯಾ ನಡೆಸಲಿರುವ ಮಾತುಕತೆಯಲ್ಲಿ ‘ಉತ್ತರ ಕೊರಿಯಾದ ಪರಮಾಣು ಯೋಜನೆ’ ಮುಖ್ಯವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

‘ಸೋಲ್ನಿಂದ ಹಲವು ಖಂಡಾಂತರ ಕ್ಷಿಪಣಿಗಳನ್ನು ಹಾರಿಸಲಾಗಿದೆ. ಈ ಕ್ಷಿಪಣಿಗಳು ಸುಮಾರು 900 ಕಿ.ಮೀ ದೂರದವರೆಗೆ ಕ್ರಮಿಸಿವೆ. ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಅಧಿಕಾರಿಗಳು ಕ್ಷಿಪಣಿ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಜಪಾನ್ಗೂ ಈ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.

‘ಉತ್ತರ ಕೊರಿಯಾ ನಡೆಸಿರುವ ಕ್ಷಿಪಣಿ ದಾಳಿಗಳಲ್ಲಿ ಎರಡು ಖಚಿತಗೊಂಡಿವೆ. ಇದು ನಮ್ಮ ವಲಯ, ದೇಶ ಮಾತ್ರವಲ್ಲ ಇಡೀ ಜಗತ್ತಿನ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯಾಗಿದೆ’ ಎಂದು ಜಪಾನ್ನ ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ಪ್ರತಿಕ್ರಿಯಿಸಿದ್ದಾರೆ.

2019ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ನಡೆಸಿದ ಮಾತುಕತೆ ಮುರಿದುಬಿದ್ದ ನಂತರ, ಉತ್ತರ ಕೊರಿಯಾವು ಪರಮಾಣು ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದರತ್ತ ಗಮನ ಹರಿಸಿದೆ. ರಷ್ಯಾ–ಉಕ್ರೇನ್ ಸಂಘರ್ಷದಲ್ಲಿ ರಷ್ಯಾ ತೆಗೆದುಕೊಳ್ಳುವ ಎಲ್ಲ ಕ್ರಮಗಳಿಗೆ ಬೇಷರತ್ ಬೆಂಬಲವನ್ನೂ ಉತ್ತರ ಕೊರಿಯಾ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.