ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾ: ಕ್ಷಿಪಣಿ ಪರೀಕ್ಷೆ ಪುನರಾರಂಭ

Published 18 ಮಾರ್ಚ್ 2024, 20:06 IST
Last Updated 18 ಮಾರ್ಚ್ 2024, 20:06 IST
ಅಕ್ಷರ ಗಾತ್ರ

ಸೋಲ್‌: ‘ಉತ್ತರ ಕೊರಿಯಾ ಸೋಮವಾರ ಬೆಳಿಗ್ಗೆ ಬಹು ಅಲ್ಪ–ಶ್ರೇಣಿಯ ಬ್ಯಾಲೆಸ್ಟಿಕ್‌ ಕ್ಷಿಪಣಿಗಳನ್ನು ಪರೀಕ್ಷಾರ್ಥವಾಗಿ ಹಾರಿಸಿದೆ’ ಎಂದು ಜಪಾನ್‌ನ ರಕ್ಷಣಾ ಸಚಿವಾಲಯ ಹೇಳಿದೆ.

‘ಬೆಳಿಗ್ಗೆ 7.44ಕ್ಕೆ ಉತ್ತರ ಕೊರಿಯಾ ಕ್ಷಿಪಣಿಯನ್ನು ಹಾರಿಸಿದೆ. ಮೊದಲ ಕ್ಷಿಪಣಿ ಹಾರಿಸಿದ 37 ನಿಮಿಷಗಳ ಬಳಿಕ ಮತ್ತೊಂದು ಕ್ಷಿಪಣಿಯನ್ನು ಹಾರಿಸಲಾಗಿದೆ. ಈ ಕ್ಷಿಪಣಿಗಳು ಕೊರಿಯನ್‌ ಪೆನಿನ್ಸುಲಾ ಹಾಗೂ ಜಪಾನ್‌ ಮಧ್ಯದ ಸಮುದ್ರ ಪ್ರದೇಶದಲ್ಲಿ ಸ್ಫೋಟಗೊಂಡಿವೆ. ಇಲ್ಲಿಯವರೆಗೆ ಯಾವುದೇ ಅಸ್ತಿ ನಾಶ ಅಥವಾ ಪ್ರಾಣಹಾನಿ ವರದಿಯಾಗಿಲ್ಲ’ ಎಂದು ಜಪಾನ್‌ ಪ್ರಧಾನಿ ಫುಮಿಯೊ ಕಿಶಿದಾ ಸಂಸತ್‌ನಲ್ಲಿ ತಿಳಿಸಿದ್ದಾರೆ.

ಪದೇ ಪದೇ ಕ್ಷಿಪಣಿಗಳನ್ನು ಹಾರಿಸುತ್ತಿರುವ ಉತ್ತರ ಕೊರಿಯಾದ ನಡೆಯನ್ನು ಖಂಡಿಸಿರುವ ಕಿಶಿದಾ ಅವರು, ‘ಇದು ಜಪಾನ್‌ ಹಾಗೂ ಅಂತರರಾಷ್ಟ್ರೀಯ ಸಮುದಾಯದ ಶಾಂತಿ ಮತ್ತು ಸುರಕ್ಷತೆಗೆ ಧಕ್ಕೆ ಒಡ್ಡುತ್ತದೆ. ಕ್ಷಿಪಣಿ ಪ್ರಯೋಗ ಮಾಡುವ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉತ್ತರ ಕೊರಿಯಾ ಉಲ್ಲಂಘಿಸುವುದನ್ನು ಜಪಾನ್‌ ವಿರೋಧಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.

ದಕ್ಷಿಣ ಕೊರಿಯಾ– ಅಮೆರಿಕ ಸೇನೆಯ ಜಂಟಿ ಸಮರಾಭ್ಯಾಸವನ್ನು ಆಕ್ರಮಣದ ಉದ್ದೇಶದ ಕವಾಯಿತು ಎಂದೇ ಉತ್ತರ ಕೊರಿಯಾ ಪರಿಗಣಿಸಿದ್ದು, ಈ ಸಮರಾಭ್ಯಾಸ ಕೊನೆಗೊಂಡ ಕೆಲ ದಿನಗಳ ಅಂತರಲ್ಲೇ ಕ್ಷಿಪಣಿಗಳನ್ನು ಹಾರಿಸಿದೆ.

‘ಉತ್ತರ ಕೊರಿಯಾ ತನ್ನ ಕ್ಷಿಪಣಿಗಳ ಪರೀಕ್ಷೆಯನ್ನು ಇನ್ನೂ ಮುಂದಿವರಿಸಬಹುದು. ಅಲ್ಲದೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ತನ್ನ ರಾಜತಾಂತ್ರಿಕ ಭವಿಷ್ಯವನ್ನು ಹೆಚ್ಚಿಸಿಕೊಳ್ಳಲು ಯುದ್ಧಶೈಲಿಯ ನಡೆಯನ್ನೂ ಅದು ತೀವ್ರವಾಗಿಸಬಹುದು’ ಎಂದು ಇತರೆ ದೇಶಗಳು ತಜ್ಞರು ಈ ಮುನ್ನ ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT