ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟ್ರೆ ಡೇಮ್ ಚರ್ಚ್‌ಗೆ ಬೆಂಕಿ ಬೀಳುವ ಒಂದು ತಾಸು ಮೊದಲು ತೆಗೆದ ಫೋಟೊ ವೈರಲ್

ಅಪ್ಪ–ಮಗಳಿಗೆ ಫೋಟೊ ನೀಡಲು ಟ್ವಿಟರ್ ನೆರವು ಕೋರಿದ ಫೋಟೊಗ್ರಾಫರ್
Last Updated 17 ಏಪ್ರಿಲ್ 2019, 6:39 IST
ಅಕ್ಷರ ಗಾತ್ರ

ಪ್ಯಾರಿಸ್:ಇಲ್ಲಿನ ಇತಿಹಾಸ ಪ್ರಸಿದ್ಧ 12ನೇ ಶತಮಾನದ ನಾಟ್ರೆ ಡೇಮ್ ಚರ್ಚ್‌ ಬೆಂಕಿ ಅನಾಹುತಕ್ಕೀಡಾಗುವುದಕ್ಕೂ ಒಂದು ಗಂಟೆ ಮೊದಲು ಪ್ರವಾಸಿಗರೊಬ್ಬರು ಸೆರೆಹಿಡಿದಿದ್ದ ಚಿತ್ರವೀಗ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಅಮೆರಿಕದ ಮಿಚಿಗನ್‌ನ ಬ್ರೂಕ್ ವಿಂಡ್ಸರ್ ಅವರು ಸ್ನೇಹಿತೆ ಜತೆ ಸೋಮವಾರ ಚರ್ಚ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅಪ್ಪ ಮತ್ತು ಮಗಳು (ವಿಂಡ್ಸರ್ ಭಾವಿಸಿರುವಂತೆ) ಆಟವಾಡುತ್ತಿರುವ ಛಾಯಾಚಿತ್ರ ಸೆರೆಹಿಡಿದಿದ್ದರು. ಇದನ್ನು ಆ ಅಪ್ಪ, ಮಗಳಿಗೆ ನೀಡಲು ಉದ್ದೇಶಿಸಿರುವುದಾಗಿ ಹೇಳಿರುವ ವಿಂಡ್ಸರ್, ಅವರನ್ನು ಹುಡಕಲು ನೆರವು ನೀಡುವಂತೆ ಕೋರಿ ಟ್ವೀಟ್ ಮಾಡಿದ್ದಾರೆ.

‘ನಾಟ್ರೆ ಡೇಮ್ ಚರ್ಚ್‌ ಬೆಂಕಿ ಅನಾಹುತಕ್ಕೀಡಾಗುವುದಕ್ಕೂ ಒಂದು ಗಂಟೆ ಮೊದಲು ನಾನು ಈ ಚಿತ್ರವನ್ನು ಸೆರೆಹಿಡಿದೆ. ಆ ತಂದೆಯ ಬಳಿ ಹೋಗಿ ಈ ಫೋಟೊ ನಿಮಗೆ ಬೇಕೇ ಎಂದು ಕೇಳಬೇಕು ಎಂದುಕೊಂಡಿದ್ದೆ. ಈಗ ನಾನದನ್ನು ಅವರಿಗೆ ನೀಡಬಯಸಿದ್ದೇನೆ. ಟ್ವಿಟರ್, ನಿನ್ನಲ್ಲೇನಾದರೂ ಮ್ಯಾಜಿಕ್ ಇದ್ದರೆ ಅವರಿಗೆ ಈ ಫೋಟೊ ಸಿಗುವಂತೆ ಮಾಡು’ ಎಂದುವಿಂಡ್ಸರ್ ಟ್ವೀಟ್ ಮಾಡಿದ್ದಾರೆ. ಇದು ವೈರಲ್ ಆಗಿದೆ.

‘ಅವರು ಅಪ್ಪ, ಮಗಳು ಹೌದಾ ಎಂಬುದು ನಿಖರವಾಗಿ ನನಗೆ ತಿಳಿದಿಲ್ಲ. ಮೇಲ್ನೋಟಕ್ಕೆ ಹಾಗೆ ಭಾವಿಸಿದೆ. ಅವರು ಚಿಕ್ಕಪ್ಪ, ಸಹೋದರ, ಸ್ನೇಹಿತ ಆಗಿರಲೂಬಹುದು. ಅವರನ್ನು ಪತ್ತೆಮಾಡುವವರೆಗೂ ಅದು ಗೊತ್ತಾಗದು’ ಎಂದೂ ಅವರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಒಂದು ವೇಳೆ ನಾನು ಆ ಸ್ಥಾನದಲ್ಲಿದ್ದಿದ್ದರೆ ಆ ಫೋಟೊ ಬೇಕೆಂದು ಬಯಸುತ್ತಿದ್ದೆ. ಆ ವ್ಯಕ್ತಿಯೂ ಹಾಗೆಯೇ ಭಾವಿಸಬಹುದು ಎಂದುಕೊಂಡಿದ್ದೇನೆ. ಫೋಟೊದಲ್ಲಿರುವ ವ್ಯಕ್ತಿಯನ್ನು ಪತ್ತೆಮಾಡುವ ಆಶಾವಾದ ಹೊಂದಿದ್ದೇನೆ ಎಂದೂವಿಂಡ್ಸರ್ ಹೇಳಿದ್ದಾರೆ.

ಸೋಮವಾರ ಸಂಜೆ ಸಂಭವಿಸಿದಬೆಂಕಿ ಅನಾಹುತದಲ್ಲಿ ನಾಟ್ರೆ ಡೇಮ್ ಚರ್ಚ್‌ನಮೇಲ್ಭಾಗದ ಪಿರಮಿಡ್ ಆಕೃತಿ ಮತ್ತು ಛಾವಣಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಚರ್ಚ್‌ನ 69 ಮೀ. ಎತ್ತರದ ಅವಳಿ ಗೋಪುರಗಳಿಗೆ ಅವಘಡದಲ್ಲಿ ಯಾವುದೇ ಹಾನಿಯಾಗಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT