ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದ ನಿರಾಶ್ರಿತ ಹಿಂದೂಗಳಿಗೆ ಭಾರತದ ಪೌರತ್ವ: ಅಮೆರಿಕದ ಸಂಘಟನೆ ಅಭಿಯಾನ

Last Updated 11 ಸೆಪ್ಟೆಂಬರ್ 2018, 13:24 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ):ಬಂಗ್ಲಾದೇಶ‌ದಿಂದ ಬಂದಿರುವ ನಿರಾಶ್ರಿತ ಹಿಂದೂಗಳಿಗೆ ಭಾರತದ ಪೌರತ್ವ ನೀಡುವಂತೆ ಆಗ್ರಹಿಸಿ ಇಲ್ಲಿನ ಸಂಘಟನೆಯೊಂದು ಅಭಿಯಾನ ಆರಂಭಿಸಿದೆ. ಬಾಂಗ್ಲಾದಿಂದ ಬಂದಿರುವ ಹಿಂದೂಗಳು ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಯಿಂದ (ಎನ್‌ಆರ್‌ಸಿ) ಹೊರಗುಳಿದಿದ್ದು, ಅವರಿಗೆ ಪೌರತ್ವ ನೀಡುವಂತೆ ಸಂಘಟನೆಯು ಭಾರತಕ್ಕೆ ಆಗ್ರಹಿಸಿದೆ.

ಸಿಂಗಬಹಿನಿ ಅಮೆರಿಕ, ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಷನ್ ಮತ್ತು ನವಬಂಗಾ ಸಂಘಟನೆಗಳ ಬ್ಯಾನರ್‌ನಡಿ ಎನ್‌ಆರ್‌ಐಗಳ ತಂಡವೊಂದು ಈ ಅಭಿಯಾನ ನಡೆಸುತ್ತಿದೆ. 1955ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದಿಂದ ‘ಪೌರತ್ವ ಮಸೂದೆ–2016’ಕ್ಕೆ ಬೆಂಬಲ ನೀಡುವಂತೆ ಕೋರಿದೆ.

ಈ ಸಂಬಂಧ ಇತ್ತೀಚೆಗೆ ನಡೆದ ವಿಶ್ವ ಹಿಂದೂ ಸಮಾವೇಶದಲ್ಲಿ ಭಾರತದ ಮುಖಂಡರನ್ನು ಸಂಘಟನೆ ಸದಸ್ಯರು ಭೇಟಿಯಾಗಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT