ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಬಂದೂಕು ದಾಳಿಯಿಂದ ಮಕ್ಕಳ ಹತ್ಯೆ ಹೆಚ್ಚು: ಅಧ್ಯಯನ ವರದಿ

Published 23 ಆಗಸ್ಟ್ 2023, 15:14 IST
Last Updated 23 ಆಗಸ್ಟ್ 2023, 15:14 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ಬಂದೂಕು ದಾಳಿಯಿಂದ ಮಕ್ಕಳ ಸಾವುಗಳ ಪ್ರಮಾಣ ಹೆಚ್ಚಿದೆ ಎಂದು ಅಮೆರಿಕನ್‌ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ ಪ್ರಕಟಿಸಿದ ಹೊಸ ಅಧ್ಯಯನ ಹೇಳಿದೆ.

ಅಧ್ಯಯನದ ಪ್ರಕಾರ 2021ರಲ್ಲಿ 4,752 ಮಕ್ಕಳು ಬಂದೂಕು ಸಂಬಂಧಿತ ದಾಳಿಯಲ್ಲಿ ಮೃತಪಟ್ಟಿದ್ದಾರೆ. 2020ರಲ್ಲಿ 4,368, 2019ರಲ್ಲಿ 3,390 ಮಕ್ಕಳು ಮೃತರಾಗಿದ್ದಾರೆ ಎಂದು ಎಎಪಿಯ ಪೀಡಿಯಾಟ್ರಿಕ್ಸ್ ಜರ್ನಲ್‌ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.

2020ರಿಂದ ಅಮೆರಿಕದಲ್ಲಿ ಮಕ್ಕಳ ಸಾವಿಗೆ ಬಂದೂಕು ದಾಳಿ ಮೊದಲ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ನಾಶ್ವಿಲ್ಲೆ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮಕ್ಕಳು ಮತ್ತು ಮೂವರು ಶಿಕ್ಷಕರ ದುರಂತ ಸಾವಿನ ನಂತರ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಸಂಸದರು ವಿಶೇಷ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. 

ಬಂದೂಕಿನಿಂದ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡವರಲ್ಲಿ ಕಪ್ಪುವರ್ಣದ ಶೇ 67ರಷ್ಟು ಹಾಗೂ ಬಿಳಿ ವರ್ಣದ ಶೇ 78ರಷ್ಟು ಮಕ್ಕಳು ಸೇರಿದ್ದಾರೆ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT