ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಂಜಾಬ್ ಪ್ರಾಂತ್ಯದ ಮೇಲಿನ ಭಾರತದ ಕ್ಷಿಪಣಿ ದಾಳಿ ‘ಯುದ್ಧದ ಸಂಕೇತ’ ಎಂದಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್, ಪ್ರತ್ಯುತ್ತರ ನೀಡುವ ಎಲ್ಲ ಹಕ್ಕು ನಮ್ಮ ದೇಶಕ್ಕಿದೆ ಎಂದಿದ್ದಾರೆ.

ಪಾಕಿಸ್ತಾನ ಸೇನೆಯ ವಕ್ತಾರ ಲೆ.ಜನರಲ್ ಅಹಮದ್ ಶರೀಫ್ ಚೌಧರಿ ದಾಳಿ ನಡೆದ ಬಳಿಕ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ಎಲ್ಲೆಲ್ಲಿ ಹಾನಿಯಾಗಿದೆ ಎಂಬುದರ ಮಾಹಿತಿ ನೀಡಿದ್ದಾರೆ.

ಬೆವಾಲ್ಪುರದಲ್ಲಿ ಸುಭಾನ್ ಮಸೀದಿಯನ್ನು ಗುರಿಯಾಗಿಸಿ ಭಾರತೀಯ ಸೇನೆ ದಾಳಿ ನಡೆಸಿದೆ. ಈ ಪ್ರದೇಶದಲ್ಲಿ ನಾಲ್ಕು ಮಸೀದಿಗಳು ಧ್ವಂಸವಾಗಿದೆ, ಜನರು ವಾಸವಿದ್ದ ವಸತಿ ಸಮುಚ್ಚಯ ನಾಶವಾಗಿದೆ. ಮುಜಾಫರಾಬಾದ್ನಲ್ಲಿ ಬಿಲಾಲ್ ಮಸೀದಿಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಮಸೀದಿ ಸಂಪೂರ್ಣವಾಗಿ ನಾಶವಾಗಿದೆ. ಇದರ ಜತೆಗೆ ಕೊಟ್ಲಿ, ಅಬ್ಬಾತ್ ಮಸೀದಿ ಕೂಡ ನೆಲಸಮವಾಗಿದೆ.

ಮುರ್ಡಿಕೆ, ಉಮಾಲ್ಕರ್ನಲ್ಲಿ ನಾಲ್ಕು ಕ್ಷಿಪಣಿಗಳು ಒಳನುಗ್ಗಿದ್ದು, ಮಸೀದಿ ನಾಶವಾಗಿದೆ. ಸಿಯಾಲ್ಕೋಟ್ನಲ್ಲಿ ಒಂದು ಕ್ಷಿಪಣಿ ಗುರಿತಪ್ಪಿ ಮೈದಾನದಲ್ಲಿ ಬಿದ್ದಿದೆ, ಇದರಿಂದ ಯಾವುದೇ ಹಾನಿಯಾಗಿಲ್ಲ. ಶಕರ್ಗಢ ಬಳಿ ಎರಡು ಬಾರಿ ಕ್ಷಿಪಣಿ ದಾಳಿ ನಡೆದಿದ್ದು ಯಾವುದೇ ಹಾನಿಯಾಗಿಲ್ಲ. ಒಂದು ಔಷಧಾಲಯಕ್ಕೆ ಸಣ್ಣಪುಟ್ಟ ಹಾನಿಯಾಗಿದೆ. ಪಾಕಿಸ್ತಾನದಲ್ಲಿ ಒಟ್ಟು ಐದು ಕಡೆ ದಾಳಿಯಾಗಿದೆ ಎಂದು ಚೌಧರಿ ತಿಳಿಸಿದ್ದಾರೆ.

ಆದರೆ ಎಷ್ಟು ಜನ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ನಿಖರ ಮಾಹಿತಿಯನ್ನು ತಿಳಿಸಿಲ್ಲ.

‘ಭಾರತ ಹೇರಿದ ಈ ಯುದ್ಧ ಸಂಕೇತಕ್ಕೆ ಸೂಕ್ತ ಪ್ರತ್ಯುತ್ತರ ನೀಡುವ ಹಕ್ಕು ಪಾಕಿಸ್ತಾನಕ್ಕೆ ಇದೆ, ನಿಜಕ್ಕೂ ಬಲವಾದ ಪ್ರತಿಕ್ರಿಯೆ ನೀಡಲಾಗುವುದು. ಶತ್ರುವನ್ನು ಹೇಗೆ ಎದುರಿಸಬೇಕೆಂದು ಚೆನ್ನಾಗಿ ತಿಳಿದಿದೆ’ ಎಂದು ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.
.Operation Sindoor: ಮೂರು ನಿಷೇಧಿತ ಉಗ್ರ ಸಂಘಟನೆಗಳ ಪ್ರಧಾನ ಕಚೇರಿ ಧ್ವಂಸ.Operation Sindoor: ರಾತ್ರಿಯಿಡಿ ಸೇನಾ ಕಾರ್ಯಾಚರಣೆ ಗಮನಿಸಿದ ಪ್ರಧಾನಿ ಮೋದಿ.ಫ್ಯಾಕ್ಟ್ ಚೆಕ್: ಭಾರತ ಸೇನೆಯು ಪಾಕಿಸ್ತಾನದ ಸಿಯಾಲ್ಕೋಟ್ ಮೇಲೆ ದಾಳಿ ನಡೆಸಿತೇ?.Fact Check|ಶ್ರೀನಗರ ವಾಯುನೆಲೆ ಗುರಿಯಾಗಿಸಿ ಪಾಕ್ ದಾಳಿ ನಡೆಸಿದೆ ಎಂಬುದು ಸುಳ್ಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.