ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಮೇಲೆ ಇಸ್ರೇಲ್ ದಾಳಿ; 29,000ಕ್ಕೂ ಅಧಿಕ ಪ್ಯಾಲೆಸ್ಟೀನಿಯನ್ನರು ಸಾವು

Published 19 ಫೆಬ್ರುವರಿ 2024, 10:33 IST
Last Updated 19 ಫೆಬ್ರುವರಿ 2024, 10:33 IST
ಅಕ್ಷರ ಗಾತ್ರ

ಕೈರೊ: ಇಸ್ರೇಲ್‌ ಪಡೆಗಳು ಗಾಜಾ ಪಟ್ಟಿ ಮೇಲೆ ನಡೆಸುತ್ತಿರುವ ದಾಳಿಯಲ್ಲಿ ಕನಿಷ್ಠ 29,092 ಪ್ಯಾಲೆಸ್ಟೀನಿಯನ್ನರು ಇದುವರೆಗೆ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಇಸ್ರೇಲ್‌ ಕಳೆದ 24 ಗಂಟೆಗಳಲ್ಲಿ ನಡೆಸಿದ ದಾಳಿಯಲ್ಲಿ 107 ಮಂದಿ ಮೃತಪಟ್ಟು, 145 ಜನರು ಗಾಯಗೊಂಡಿದ್ದಾರೆ ಎಂದೂ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹಮಾಸ್‌ ಬಂಡುಕೋರರು ದಕ್ಷಿಣ ಇಸ್ರೇಲ್‌ ಮೇಲೆ ಅಕ್ಟೋಬರ್‌ 7ರಂದು ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ತೀವ್ರ ದಾಳಿ ನಡೆಸುತ್ತಿದೆ.

'ಗಾಜಾ ಸ್ಮಶಾನಭೂಮಿಯಾಗುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಹಾಗೂ ವಿವಿಧ ರಾಷ್ಟ್ರಗಳು, 'ಮಾನವೀಯ ಆಧಾರದಲ್ಲಿ ಗಾಜಾದಲ್ಲಿ ಕದನ ವಿರಾಮ ಘೋಷಣೆ ಮಾಡಬೇಕು' ಎಂದು ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT