ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೆನ್‌ಫೀಲ್ಡ್‌ ಭ್ರಷ್ಟಾಚಾರ ಪ್ರಕರಣ: ನವಾಜ್‌ ಖುಲಾಸೆ

Published 29 ನವೆಂಬರ್ 2023, 16:40 IST
Last Updated 29 ನವೆಂಬರ್ 2023, 16:40 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ : ಅವೆನ್‌ಫೀಲ್ಡ್‌ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್‌ ಹೈಕೋರ್ಟ್‌ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಖುಲಾಸೆಗೊಳಿಸಿದೆ.

ಮುಖ್ಯನ್ಯಾಯಮೂರ್ತಿ ಆಮೀರ್‌ ಫಾರೂಖ್‌ ಹಾಗೂ ನ್ಯಾಯಮೂರ್ತಿ ಮಿಯಾಂಗುಲ್‌ ಹಸನ್‌ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ. 

ಹಾಗೆಯೇ, ಫ್ಲ್ಯಾಗ್‌ಶಿಪ್‌ ಭ್ರಷ್ಟಚಾರ ಪ್ರಕರಣದಲ್ಲಿ ನವಾಜ್‌ ಅವರನ್ನು ವಿಚಾರಣಾ ನ್ಯಾಯಾಲಯವು ಬಿಡುಗಡೆಗೊಳಿಸಿದ್ದನ್ನು ಪ್ರಶ್ನಿಸಿ ತಾನು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಷನಲ್‌ ಅಕೌಂಟೆಬಿಲಿಟಿ ಬ್ಯುರೊ (ಎನ್‌ಎಬಿ) ಹಿಂಪಡೆದಿದೆ. ಇದರಿಂದಾಗಿ ನವಾಜ್‌ ಅವರು ಈ ಪ್ರಕರಣದಿಂದಲೂ ಬಿಡುಗಡೆ ಹೊಂದಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT