ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ನ.6ರಂದು ಚುನಾವಣೆ ನಡೆಸಲು ಪ್ರಸ್ತಾವ

Published 13 ಸೆಪ್ಟೆಂಬರ್ 2023, 16:26 IST
Last Updated 13 ಸೆಪ್ಟೆಂಬರ್ 2023, 16:26 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ನವೆಂಬರ್‌ 6ರಂದು ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂದು ಅಧ್ಯಕ್ಷ ಆರಿಫ್ ಅಲ್ವಿ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ (ಸಿಇಸಿ) ಬುಧವಾರ ಪತ್ರ ಬರೆದಿದ್ದಾರೆ. 

ಸಿಇಸಿ ಸಿಕಂದರ್‌ ಸುಲ್ತಾನ ರಾಜ ಅವರಿಗೆ ಬರೆದಿರುವ ಪತ್ರದಲ್ಲಿ, ‘ನ್ಯಾಷನಲ್‌ ಅಸೆಂಬ್ಲಿ‘ ವಿಸರ್ಜಿಸಿ 90 ದಿನಗಳು ಕಳೆಯುವ ಒಳಗೆ ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸಲು ಅಧ್ಯಕ್ಷರಿಗೆ ಇರುವ ಅಧಿಕಾರದ ಕುರಿತ ಸಂವಿಧಾನದ ವಿಧಿ 48(5)ಅನ್ನು ಅಲ್ವಿ ಅವರು ಉಲ್ಲೇಖಿಸಿದ್ದಾರೆ.

ಅದರಂತೆ ಸರ್ಕಾರ ವಿಸರ್ಜನೆಯಾದ 89ನೇ ದಿನವಾದ ನ.6ರಂದು ಚುನಾವಣೆ ನಡೆಸುವಂತೆ ಪ್ರಸ್ತಾವ ಇರಿಸಿದ್ದಾರೆ.

ಪಾಕಿಸ್ತಾನದ ಹಂಗಾಮಿ ಕಾನೂನು ಸಚಿವ ಅಹ್ಮದ್‌ ಇರ್ಫಾನ್‌ ಅಸ್ಲಂ ಅವರನ್ನು ಸೋಮವಾರ ಅಲ್ವಿ ಅವರು ಭೇಟಿಯಾಗಿದ್ದರು. ಆ ಬಳಿಕ ಈ ಬೆಳವಣಿಗೆ ನಡೆದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT