ರಾವಲ್ಪಿಂಡಿ: ನಿರ್ದಿಷ್ಟ ಗುರಿ ಕೇಂದ್ರೀಕರಿಸಿ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯವುಳ್ಳ ಶಹೀನ್–2 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಪಾಕಿಸ್ತಾನವು ಮಂಗಳವಾರ ಯಶಸ್ವಿಯಾಗಿ ನಡೆಸಿದೆ.
ಈ ಕ್ಷಿಪಣಿಗಳು ಕ್ರಮಿಸಬಲ್ಲ ದೂರ ಸೇರಿದಂತೆ ಯಾವುದೇ ತಾಂತ್ರಿಕ ವಿವರಗಳನ್ನು ಪಾಕಿಸ್ತಾನ ಸೇನೆಯು ಹಂಚಿಕೊಂಡಿಲ್ಲ.
ಕ್ಷಿಪಣಿ ಕಾರ್ಯಕ್ಷಮತೆಯ ಮೌಲ್ಯಮಾಪನ, ಗುರಿ ತಲುಪುವಲ್ಲಿನ ನಿಖರತೆ ಹಾಗೂ ಶತ್ರುಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯದ ಬಗ್ಗೆ ಪರಿಶೀಲಿಸಲು ಹಾಗೂ ಸೇನಾಪಡೆಗಳಿಗೆ ತರಬೇತಿ ನೀಡಲು ಈ ಪ್ರಯೋಗ ನಡೆಸಲಾಯಿತು ಎಂದು ಪಾಕಿಸ್ತಾನ ಸೇನೆಯು ತಿಳಿಸಿದೆ.