ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಮತ್ತೊಂದು ಪೋಲಿಯೊ ಪ್ರಕರಣ ಪತ್ತೆ

Last Updated 30 ಏಪ್ರಿಲ್ 2022, 11:11 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌:ಪಾಕಿಸ್ತಾನದ ಖೈಬರ್-ಪಖ್ತುಂಖ್ವಾ ಪ್ರಾಂತ್ಯದಲ್ಲಿ ಎರಡು ವರ್ಷದ ಬಾಲಕಿಗೆ ಪೋಲಿಯೊ ದೃಢಪಟ್ಟಿದೆ. ದೇಶದಲ್ಲಿ ಒಂದು ವಾರದಲ್ಲಿ ವರದಿಯಾದ ಎರಡನೇ ಪ್ರಕರಣ ಇದಾಗಿದೆ.

ಕ್ಷಿಪ್ರವಾಗಿ ಸೋಂಕು ಹರಡುವುದರಿಂದ ಹೆಚ್ಚು ಜನರು ಸೇರುವ ಈದ್‌ ರಜಾದಿನಗಳ ಬಗ್ಗೆ ಆರೋಗ್ಯ ಅಧಿಕಾರಿಗಳಲ್ಲಿ ಕಳವಳ ಉಂಟಾಗಿದೆ.

ಪೋಲಿಯೊ ಪೀಡಿತ ದೇಶಗಳಲ್ಲಿ ಅಫ್ಗಾನಿಸ್ತಾನದ ನಂತರ ಪಾಕಿಸ್ತಾನ ಎರಡನೇ ಸ್ಥಾನ ಹೊಂದಿದೆ. ಪೋಲಿಯೊ ತೀವ್ರಗತಿಯಲ್ಲಿ ಹರಡುವ ವೈರಾಣುವಾಗಿದೆ. ಜಗತ್ತಿನಾದಾದ್ಯಂತ ಮಕ್ಕಳು ಈ ರೋಗದಿಂದ ಪಾರ್ಶ್ವವಾಯು, ಮಾರಣಾಂತಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

‘ಇಸ್ಲಾಮಾಬಾದ್‌ನಲ್ಲಿಯ ರಾಷ್ಟ್ರೀಯ ಪೋಲಿಯೊ ಪ್ರಯೋಗಾಲಯವು ಎರಡು ವರ್ಷದ ಬಾಲಕಿಯಲ್ಲಿ ಟೈಪ್-1 ವೈಲ್ಡ್ ಪೋಲಿಯೊ ವೈರಸ್‌ ಇರುವುದನ್ನು ದೃಢಪಡಿಸಿದೆ’ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

ಇದಕ್ಕೂ ಮೊದಲು ಏಪ್ರಿಲ್‌ 22ರಂದು 15 ತಿಂಗಳ ಬಾಲಕನಲ್ಲಿ ಪೋಲಿಯೊ ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT