ಇಸ್ಲಾಮಾಬಾದ್:ಪಾಕಿಸ್ತಾನಕ್ಕೆ ಅಕ್ರಮವಾಗಿ ನುಸುಳಿದ ಆರೋಪದ ಮೇಲೆ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಹಮೀದ್ ನಿಹಾಲ್ ಅನ್ಸಾರಿಯನ್ನು ಪಾಕಿಸ್ತಾನ ಸೋಮವಾರ ಬಿಡುಗಡೆ ಮಾಡಿದೆ.

ನಕಲಿ ಗುರುತಿನ ಚೀಟಿ ಹೊಂದಿದ್ದ ಮುಂಬೈ ನಿವಾಸಿ ಹಮೀದ್ ಅನ್ಸಾರಿ (33)ಯನ್ನು2012ರಲ್ಲಿ ಬಂಧಿಸಲಾಗಿತ್ತು. 2015ರ ಡಿಸೆಂಬರ್ 15ರಂದು ವಿಚಾರಣೆ ನಡೆಸಿದ ಸೇನಾ ನ್ಯಾಯಾಲಯ ಅವರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು. ಡಿಸೆಂಬರ್ 15ರಂದು ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ, ಬಿಡುಗಡೆಗೆ ಪೂರಕ ದಾಖಲೆಗಳು ಸಿದ್ಧವಾಗದ ಕಾರಣ ಅವರು ಭಾರತಕ್ಕೆ ಬರುವುದು ಸಾಧ್ಯವಾಗಿರಲಿಲ್ಲ.

ಹಮೀದ್ ಬಿಡುಗಡೆ ಮತ್ತು ಭಾರತಕ್ಕೆ ವಾಪಸ್ಸು ಕಳುಹಿಸಲು ಪೂರಕವಾದ ಎಲ್ಲ ಪ್ರಕ್ರಿಯೆಗಳನ್ನೂ ಒಂದು ತಿಂಗಳೊಳಗೆ ಪೂರೈಸುವಂತೆ ಸರ್ಕಾರಕ್ಕೆ ಪೇಶಾವರ ಹೈಕೋರ್ಟ್ ಕಳೆದ ಗುರುವಾರ ಗಡುವು ನೀಡಿತ್ತು.

‘ಅನ್ಸಾರಿ ಶಿಕ್ಷೆ ಪೂರ್ಣಗೊಂಡಿದ್ದು, ಅವರನ್ನು ಬಿಡುಗಡೆ ಮಾಡಲಾಗುತ್ತಿದೆ. ಭಾರತಕ್ಕೆ ವಾಪಸ್ಸು ಕಳುಹಿಸಲಾಗುವುದು’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.