ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರು ಪಾಕ್‌ಗೆ ಹೋದರೂ ಸದೆಬಡಿಯುತ್ತೇವೆ ಎಂದಿದ್ದ ಸಿಂಗ್‌ ಹೇಳಿಕೆಗೆ ಪಾಕ್‌ ಟೀಕೆ

Published 6 ಏಪ್ರಿಲ್ 2024, 16:05 IST
Last Updated 6 ಏಪ್ರಿಲ್ 2024, 16:05 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಿ ಭಯೋತ್ಪಾದಕರು ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಓಡಿಹೋದರೆ ಅಲ್ಲಿಗೂ ನುಗ್ಗಿ ಅವರನ್ನು ಸದೆಬಡಿಯುತ್ತೇವೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆಯನ್ನು ಪಾಕಿಸ್ತಾನ ಶನಿವಾರ ಟೀಕಿಸಿದೆ.  

ಬ್ರಿಟನ್‌ನ ದಿನ ಪತ್ರಿಕೆ ‘ದಿ ಗಾರ್ಡಿಯನ್‌’ ಪ್ರಕಟಿಸಿದ್ದ ವರದಿಯೊಂದರ ಸಂಬಂಧ ಕೇಳಲಾದ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯಿಸಿದ್ದ ಸಿಂಗ್‌, ಭಯೋತ್ಪಾದಕರು ನೆರೆಯ ದೇಶಕ್ಕೆ ಓಡಿಹೋದರೂ ಪಾಕಿಸ್ತಾನಕ್ಕೆ ನುಗ್ಗಿ ಕೊಲ್ಲುತ್ತೇವೆ ಎಂದು ಹೇಳಿದ್ದರು.

‘ಚುನಾವಣಾ ಲಾಭಕ್ಕಾಗಿ ಇಂತಹ ದ್ವೇಷದ ಹೇಳಿಕೆಯನ್ನು ಭಾರತ ಸರ್ಕಾರದ ಸಚಿವರು ನೀಡಿದ್ದಾರೆ. ಈ ಬೇಜವಾಬ್ದಾರಿ ನಡವಳಿಕೆಯು ಪ್ರಾದೇಶಿಕ ಶಾಂತಿಯನ್ನು ಹಾಳುಮಾಡುತ್ತದೆ. ಮಾತ್ರವಲ್ಲದೆ, ರಚನಾತ್ಮಕ ಪಾಲ್ಗೊಳ್ಳುವಿಕೆಯ ನಿರೀಕ್ಷೆಗಳಿಗೆ ಅಡ್ಡಿಯಾಗುತ್ತದೆ’ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT