ಇಸ್ಲಾಮಾಬಾದ್: ದಿನದಿಂದ ದಿನಕ್ಕೆ ಇಡೀ ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ಜಾಸ್ತಿಯಾಗುತ್ತಲೇ ಇದ್ದು, ಪಾಕಿಸ್ತಾನದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 58,278ಕ್ಕೆ ಏರಿದ್ದರೆ, ಇದುವರೆಗೂ1,202 ಜನರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಆರೋಗ್ಯ ಸಚಿವಾಲಯ ತಿಳಿಸಿದೆ.

ಜಿಯೊ ನ್ಯೂಸ್ ವರದಿ ಪ್ರಕಾರ, ಸಿಂಧ್ ಪ್ರಾಂತ್ಯದಲ್ಲಿ 23,507, ಪಂಜಾಬ್‌ನಲ್ಲಿ 20,654, ಖೈಬರ್-ಫಕ್ತುಂಕ್ವದಲ್ಲಿ 8,080, ಬಲೂಚಿಸ್ತಾನದಲ್ಲಿ 3,468, ಇಸ್ಲಾಮಾಬಾದ್‌ನಲ್ಲಿ 1,728 , ಗಿಲ್ಗಿಚ್-ಬಲ್ತಿಸ್ತಾನ್‌ನಲ್ಲಿ 630 ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 211 ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

ವಿಪಕ್ಷ ನಾಯಕ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್-ಎನ್) ಅಧ್ಯಕ್ಷ ಶೇಹ್‌ಬಾಜ್ ಶರೀಫ್ ಇಮ್ರಾನ್ ಖಾನ್ ಸರ್ಕಾರವನ್ನು ಟೀಕಿಸಿದ್ದು, ಕೋವಿಡ್-19 ಲಾಕ್‌ಡೌನ್ ತೆರೆಯುವ ಮೊದಲೇ ಜಾರಿಯಲ್ಲಿದ್ದ ನೀತಿಯು ದೇಶದಲ್ಲಿ ಕೋವಿಡ್-19 ಸಾವುಗಳನ್ನು ಕಡಿಮೆ ಮಾಡಬಹುದಿತ್ತು ಎಂದು ತಿಳಿಸಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.

ಅಲ್ಲದೆ, ಪಾಕಿಸ್ತಾನ ಸರ್ಕಾರವು ಸಮಯವನ್ನು ವ್ಯರ್ಥ ಮಾಡಬಾರದು ಮತ್ತು ಮಾರಕ ಸಾಂಕ್ರಾಮಿಕ ರೋಗವನ್ನು ಎದುರಿಸಲು ರಾಷ್ಟ್ರೀಯ ಕಾರ್ಯತಂತ್ರವನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.