ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Partygate: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ

Published 10 ಜೂನ್ 2023, 2:50 IST
Last Updated 10 ಜೂನ್ 2023, 2:50 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಹಠಾತ್ತಾಗಿ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಕೋವಿಡ್ ಪಿಡುಗಿನ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ, ಸಂತೋಷಕೂಟಗಳನ್ನು ಆಯೋಜಿಸಿದ್ದ ಬಗ್ಗೆ ಮಾಜಿ ಪ್ರಧಾನಿ ಸಂಸತ್‌ಗೆ ತಪ್ಪು ಮಾಹಿತಿ ನೀಡಿದ್ದರು ಎಂಬ ಆರೋಪದ ಕುರಿತಾಗಿ ತನಿಖೆ ನಡೆಯುತ್ತಿದೆ.

ಈ ಪಾರ್ಟಿಗೇಟ್ ಹಗರಣದಲ್ಲಿ ಬೋರಿಸ್ ಜಾನ್ಸನ್ ವಿರುದ್ಧ ಸಂಸದೀಯ ಸಮಿತಿಯಿಂದ ವರದಿ ಸಲ್ಲಿಕೆಯಾಗಲಿದ್ದು, ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಈ ವರದಿ ಬಿಡುಗಡೆಗೆ ಮೊದಲೇ ಜಾನ್ಸನ್ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ನಾನು ಸುಳ್ಳು ಹೇಳಿಲ್ಲ, ತಮ್ಮ ವಿರುದ್ಧ ಪಿತೂರಿ ನಡೆದಿದೆ ಎಂದು 58 ವರ್ಷದ ಬೋರಿಸ್ ಜಾನ್ಸನ್ ಬಿಡುಗಡೆ ಮಾಡಿರುವ ಪ್ರಕಟಣೆ ಹೇಳಿದೆ. ತನಿಖಾ ಸಂಸ್ಥೆಯು ಸತ್ಯಾಂಶವನ್ನು ಪರಿಗಣಿಸದೇ ಯಾವುದೇ ಪುರಾವೆಯಿಲ್ಲದೆ ನನ್ನನ್ನು ತಪ್ಪಿತಸ್ಥನೆಂದು ಸಾಬೀತು ಮಾಡಲು ಹೊರಟಿದೆ ಎಂದು ದೂರಿದ್ದಾರೆ.

ಮಾರ್ಚ್ ತಿಂಗಳಲ್ಲಿ ಸದನದ ದಿಕ್ಕು ತಪ್ಪಿಸುವ ಪ್ರಮಾದ ಎಸಗಿದ್ದಕ್ಕೆ ಬೋರಿಸ್ ಜಾನ್ಸನ್ ಕ್ಷಮೆಯಾಚಿಸಿದ್ದರು.

ಈಗ ತೆರವಾಗಿರುವ ಸಂಸತ್ ಸ್ಥಾನಕ್ಕೆ ಮರು ಚುನಾವಣೆಯಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT