‘ವಿಶ್ವದಲ್ಲಿ 100 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತ ಮತ್ತು ಚೀನಾ ರಾಷ್ಟ್ರಗಳು ಅಕ್ಕಪಕ್ಕದಲ್ಲಿಯೇ ಇವೆ. ಜಾಗತಿಕವಾಗಿ ಎರಡೂ ರಾಷ್ಟ್ರಗಳು ಮುಂದುವರಿಯುತ್ತಿವೆ. ಇವು ಪರಸ್ಪರ ಗಡಿಯನ್ನು ಹಂಚಿಕೊಂಡಿವೆ. ಹೀಗಾಗಿ ಇದು ನಿಜಕ್ಕೂ ಕ್ಲಿಷ್ಟಕರ ಸಮಸ್ಯೆಯಾಗಿದೆ. ಭಾರತ ಮತ್ತು ಚೀನಾ ನಡುವಿನ 3,500 ಕಿ.ಮೀ ಗಡಿಯು ವಿವಾದದಲ್ಲಿದೆ. ಗಡಿಯಲ್ಲಿ ಶಾಂತಿ ಇದ್ದರೆ ಉಳಿದ ಸಂಬಂಧಗಳು ಉತ್ತಮವಾಗಿರುತ್ತವೆ’ ಎಂದು ತಿಳಿಸಿದರು.