ಜೆರುಸಲೇಮ್: ಎನ್‌ಎಸ್ಒ ಗ್ರೂಪ್‌ನ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ದುರ್ಬಳಕೆಯಾಗಿರುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ತಂತ್ರಾಂಶದ ಬಳಕೆ ಕುರಿತ ಪರಾಮರ್ಶೆಗೆ ಇಸ್ರೇಲ್ ಮುಂದಾಗಿದೆ.

ವಿದೇಶಾಂಗ ವ್ಯವಹಾರಗಳು ಹಾಗೂ ರಕ್ಷಣಾ ಸಮಿತಿ ಈ ಸಂಬಂಧಆ. 9ರಂದು ಗೌಪ್ಯ ಸಭೆ ನಡೆಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಸಮಿತಿಯ ಅಧ್ಯಕ್ಷರೂ ಆದ ಸಂಸದ ರಾಮ್‌ಬೆನ್ ಬರಾಕ್ ಅವರು ಆ ದಿನ ಸಮಿತಿ ಸಭೆ ನಡೆಯಲಿದೆ ಎಂಬುದನ್ನು ನಿರಾಕರಿಸಿದ್ದಾರೆ.

ಪೆಗಾಸಸ್ ತಂತ್ರಾಂಶ ಮಾತ್ರವಲ್ಲ, ವಿವಿಧ ಕಂಪನಿಗಳ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಈ ಸಮಿತಿ ಪರಾಮರ್ಶೆ ನಡೆಸುವುದು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಎನ್‌ಎಸ್ಒ ಅಭಿವೃದ್ಧಿಪಡಿಸಿರುವ ಪೆಗಾಸಸ್ ಗೂಢಚರ್ಯೆ ತಂತ್ರಾಂಶವನ್ನು ಬಳಸಿ, ಹ್ಯಾಕ್ ಮಾಡಿರುವುದನ್ನು, ಆಯ್ದ ರಾಜಕಾರಣಿಗಳು, ಪತ್ರಕರ್ತರ ಮೇಲೆ ಕಣ್ಗಾವಲಿರಿಸಿದ್ದರ ಕುರಿತು ವಿವಿಧ ಮಾಧ್ಯಮ ಸಂಸ್ಥೆಗಳಿರುವ ಕೂಟ ‘ಪೆಗಾಸಸ್ ಪ್ರಾಜೆಕ್ಟ್’ ನಡಿ ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ.

ಇಸ್ರೇಲ್‌ನ ಕ್ಯಾಂಡಿರು, ಕ್ವಾಡ್ರೀಮ್ ಎಂಬ ಸಂಸ್ಥೆಗಳು ಸಹ ತಾವು ಅಭಿವೃದ್ಧಿಪಡಿಸಿರುವ ಗೂಢಚರ್ಯೆ ತಂತ್ರಾಂಶಗಳನ್ನು ಹಲವು ದೇಶಗಳಿಗೆ ಮಾರಾಟ ಮಾಡಿವೆ ಎಂದೂ ಈ ವರದಿಯಲ್ಲಿ ವಿವರಿಸಲಾಗಿದೆ.

ಸ್ವದೇಶಿ ನಿರ್ಮಿತ ವಿಮಾನವಾಹಕ ಯುದ್ಧನೌಕೆಯ ಪ್ರಯೋಗಾರ್ಥ ಸಂಚಾರ ಆರಂಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.