ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ ಜೊತೆಗಿನ ರಕ್ಷಣಾ ಒಪ್ಪಂದ ಬೆಳೆಯುತ್ತಿದೆ, ಗಟ್ಟಿಯಾಗುತ್ತಿದೆ: ಅಮೆರಿಕ

Published 31 ಮೇ 2024, 2:57 IST
Last Updated 31 ಮೇ 2024, 2:57 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಹಾಗೂ ಭಾರತ ನಡುವಿನ ರಕ್ಷಣಾ ಸಹಯೋಗ ಬೆಳೆಯುತ್ತಿದೆ ಹಾಗೂ ಗಟ್ಟಿಯಾಗುತ್ತಿದೆ ಎಂದು ಪೆಂಟಗನ್‌ ಗುರುವಾರ ತಿಳಿಸಿದೆ.

‘ನಮ್ಮ ನಡುವಿನ ಸಹಕಾರ ಹಾಗೂ ಸೇನಾ ಸಂಬಂಧ ಗಟ್ಟಿಯಾಗುತ್ತಿರುವುದನ್ನು ನೀವು ನೋಡಿದ್ದೀರಿ. ಭಾರತದ ನಿಯೋಗಕ್ಕೆ ಕಾರ್ಯದರ್ಶಿಯವರು ಪೆಂಟಗನ್‌ನಲ್ಲಿ ಔತಣ ಏರ್ಪಡಿಸಿದ್ದಾರೆ. ಭಾರತದ ರಕ್ಷಣಾ ಕಾರ್ಯದರ್ಶಿಯನ್ನು ಭೇಟಿ ಮಾಡಲು ಕಾರ್ಯದರ್ಶಿಯವರು ಅಲ್ಲಿಗೂ ಪ್ರಯಾಣ ಮಾಡಿದ್ದಾರೆ. ಆದ್ದರಿಂದ, ನೀವು ಖಂಡಿತವಾಗಿಯೂ ಬೆಳೆಯುತ್ತಿರುವ, ಗಟ್ಟಿಯಾಗುತ್ತಿರುವ ಸೇನಾ ಸಂಬಂಧವನ್ನು ನೋಡಿದ್ದೀರಿ’ ಎಂದು ಪೆಂಟಗನ್‌ನ ಉಪ ವಾರ್ತಾ ಕಾರ್ಯದರ್ಶಿ ಸಬ್ರಿನಾ ಸಿಂಗ್‌ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

‘ಕಾರ್ಯದರ್ಶಿಯವರ ಪ್ರವಾಸದ ವೇಳೆ ನಡೆದ ಒಪ್ಪಂದದ ಬಗ್ಗೆ ನನ್ನ ಬಳಿ ಈಗ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಭಾರತದಲ್ಲೇ ಉತ್ಪಾದನೆ ಘಟಕ ಸ್ಥಾಪಿಸುವ ಬಗ್ಗೆ ಘೋಷಣೆಯಾಗಿದೆ. ಹೀಗಾಗಿ ನಮ್ಮ ಸೇನಾ ಸಂಬಂಧ ಬಿಗಿಯಾಗಿದೆ. ಇದರ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಪಾಲುದಾರಿಕೆ ‘INDUS-X’ 2003ರ ಜೂನ್‌ನಲ್ಲಿ ಪ್ರಾರಂಭವಾಗಿತ್ತು. ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಉಭಯ ರಾಷ್ಟ್ರಗಳು ಮಾರ್ಗಸೂಚಿಯನ್ನು ರಚಿಸಿಕೊಂಡಿವೆ.

F-414 ಜೆಟ್ ಎಂಜಿನ್‌ಗಳನ್ನು ಭಾರತದಲ್ಲೇ ಉತ್ಪಾದಿಸಲು ಜಿ.ಇ ಏರೋಸ್ಪೇಸ್ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಡುವಿನ ಪ್ರಸ್ತಾವಿತ ಒಪ್ಪಂದ ಇದಕ್ಕೆ ಉದಾಹರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT