ಸಿಂಗಪುರ: ಉತ್ತರ ಸಿಂಗಪುರದ ಮಾರ್ಸಿಲಿಂಗ್ ರೈಸ್ ವಸತಿ ಪ್ರದೇಶದಲ್ಲಿರುವ ಶ್ರೀ ಶಿವ–ಕೃಷ್ಣ ದೇವಾಲಯದಲ್ಲಿ ಭಾನುವಾರ ನಡೆದ ಪವಿತ್ರೀಕರಣ ಕಾರ್ಯಕ್ರಮಕ್ಕೆ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಹಾಜರಾದರು.

ಸಮಾರಂಭದಲ್ಲಿ ಸುಮಾರು 10,000 ಭಕ್ತರು ಪಾಲ್ಗೊಂಡರು.

ಸಿಂಗಪುರದಲ್ಲಿ ಶಿವ ಹಾಗೂ ಶ್ರೀ ಕೃಷ್ಣ ಇಬ್ಬರನ್ನೂ ಆರಾಧಿಸುವ ಏಕೈಕ ದೇವಾಲಯ ಇದಾಗಿದೆ. ಇಲ್ಲಿ ಮೂರನೇ ಬಾರಿಗೆ ಪವಿತ್ರೀಕರಣ ಕಾರ್ಯಗಳು ನಡೆದಂತಾಗಿದೆ. 1996 ಹಾಗೂ 2008ರಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು.

ದೇಗುಲವು ಆಧ್ಯಾತ್ಮಿಕ ಕೇಂದ್ರವಾಗಿ ಉಳಿಯುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ.

ದೇವಾಲಯದಿಂದ ನೂರು ಮೀಟರ್ ದೂರದಲ್ಲಿ ಹಾಕಿದ್ದ ಟೆಂಟ್ಗಳ ಬಳಿ ಧಾರ್ಮಿಕ ವಿಧಿವಿಧಾನಗಳು ಬೆಳಿಗ್ಗೆ 7ರಿಂದಲೇ ಆರಂಭವಾದವು. ಬಳಿಕ ಮೆರವಣಿಗೆ ಸಾಗಿತು. ಪವಿತ್ರ ನೀರನ್ನು ದೇವಾಲಯದಲ್ಲಿ ಪ್ರೋಕ್ಷಣೆ ಮಾಡಲಾಯಿತು. ಮುಖ್ಯ ಗೋಪುರಕ್ಕೆ ಕುಂಬಾಭಿಷೇಕ ನೆರವೇರಿಸಲಾಯಿತು. ಭಕ್ತರು, ಪುರೋಹಿತರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸಿದರು ಎಂದು ವರದಿಯಾಗಿದೆ.

ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡ ಪ್ರಧಾನಿ ವಾಂಗ್ ಅವರೊಂದಿಗೆ ಸಚಿವ ಝಾಕಿ ಮೊಹಮದ್ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.