ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ

Published 22 ಮಾರ್ಚ್ 2024, 11:19 IST
Last Updated 22 ಮಾರ್ಚ್ 2024, 11:19 IST
ಅಕ್ಷರ ಗಾತ್ರ

ಥಿಂಪೂ (ಭೂತಾನ್): ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ದಿ ಡ್ರಕ್‌ ಗ್ಯಾಲ್ಪೊ’ ಎಂಬ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೂತಾನ್ ದೊರೆ ಜಿಗ್ಮೆ ಖೇಸರ್ ನಾಂಗೇಲ್‌ ವಾಂಗ್‌ಚುಕ್ ಅವರು ನೀಡಿ ಗೌರವಿಸಿದ್ದಾರೆ. ಪ್ರಧಾನಿ ಮೋದಿ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ.

‘ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ದಿ ಡ್ರಕ್‌ ಗ್ಯಾಲ್ಪೊ’ ಎಂಬ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಸಂತಸವಾಗಿದೆ. ನಾನು ಈ ಪ್ರಶಸ್ತಿಯನ್ನು 140 ಕೋಟಿ ಭಾರತೀಯರಿಗೆ ಅರ್ಪಿಸುತ್ತೇನೆ’ ಎಂದು ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

2021ರ ಡಿ.17ರಂದು ಭೂತಾನ್‌ನ 114ನೇ ‘ರಾಷ್ಟ್ರೀಯ ದಿನಾಚರಣೆ’ ಸಂದರ್ಭದಲ್ಲಿ ಈ ಪುರಸ್ಕಾರ ಘೋಷಿಸಲಾಗಿತ್ತು. ಈ ಕುರಿತು ಪ್ರಧಾನಿ ಲೊಟೆ ಶೇರಿಂಗ್ ಸಾಮಾಜಿಕ ಮಾಧ್ಯಮಗಳಲ್ಲಿ ಈ ಮಾಹಿತಿ ನೀಡಿದ್ದರು.

‘ದೇಶದ ಅತ್ಯುನ್ನತ ನಾಗರಿಕ ಗೌರವ ‘ಡ್ರಕ್‌ ಗ್ಯಾಲ್ಪೊ’ ಪುರಸ್ಕಾರಕ್ಕೆ ಘನತೆವೆತ್ತ ಪ್ರಧಾನಿ ನರೇಂದ್ರ ಮೋದಿ ಜೀ ಅವರ ಹೆಸರನ್ನು ಘೋಷಣೆ ಮಾಡಲು ಹರ್ಷಗೊಂಡಿದ್ದೇನೆ’ ಎಂದು ಲೊಟೆ ಶೇರಿಂಗ್ ಹೇಳಿದ್ದರು

2022ರಲ್ಲಿ ಮೋದಿ ಅವರು ಅಮೆರಿಕದ ಪ್ರತಿಷ್ಥಿತ ‘ಲೀಜನ್‌ ಆಫ್‌ ಮೆರಿಟ್‌’ ಪ್ರಶಸ್ತಿಗೆ ಭಾಜನರಾಗಿದ್ದರು. 2019ರಲ್ಲಿ ರಷ್ಯಾ ಸರ್ಕಾರವು ಅತ್ಯುನ್ನತ ನಾಗರಿಕ ಗೌರವ ಪುರಸ್ಕಾರ ನೀಡಿತ್ತು. 2019ರಲ್ಲಿ ಯುಎಇಯ ‘ಆರ್ಡರ್ ಆಫ್ ಝಾಯೇದ್ ಪ್ರಶಸ್ತಿ’ಗೂ ಮೋದಿ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT