ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ

Published 21 ಮೇ 2023, 4:16 IST
Last Updated 21 ಮೇ 2023, 4:16 IST
ಅಕ್ಷರ ಗಾತ್ರ

ಹಿರೋಷಿಮಾ: ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನಕ್ಕೆ ಭೇಟಿ ನೀಡಿ ಪುಷ್ಟ ನಮನ ಸಲ್ಲಿಸಿದರು.

ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಪರಮಾಣು ದಾಳಿಗೆ ಬಲಿಯಾದವರ ನೆನಪಿಗಾಗಿ ಹಿರೋಷಿಮಾದಲ್ಲಿ ಶಾಂತಿ ಸ್ಮಾರಕ ನಿರ್ಮಿಸಲಾಗಿದೆ. ಜಿ7 ಶೃಂಗದಲ್ಲಿ ಭಾಗವಹಿಸಿದ ಇತರ ದೇಶಗಳ ನಾಯಕರು ಶಾಂತಿ ಸ್ಮಾರಕಕ್ಕೆ ಗೌರವ ಸೂಚಿಸಿದ್ದಾರೆ.

ಶಾಂತಿ ಸ್ಮಾರಕಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋಗಳನ್ನು ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ, ’ ಪ್ರಧಾನಿ ನರೇಂದ್ರ ಮೋದಿ ಅವರು ಹಿರೋಷಿಮಾ ಶಾಂತಿ ಸ್ಮಾರಕ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ತಮ್ಮ ದಿನವನ್ನು ಪ್ರಾರಂಭಿಸಿದ್ದಾರೆ. ಹಿರೋಷಿಮಾ ಸಂತ್ರಸ್ತರಿಗೆ ಪ್ರಧಾನಿ ಅವರು ಗೌರವ ಸೂಚಿಸಿದ್ದಾರೆ. ಮ್ಯೂಸಿಯಂನಲ್ಲಿರುವ ದಾಖಲಾತಿಗಳನ್ನು ವೀಕ್ಷಿಸಿದರು. ಸಂದರ್ಶಕರ ಪುಸ್ತಕದಲ್ಲಿ ಪ್ರಧಾನಿ ಅವರು ಸಹಿ ಮಾಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಮೇ 19ರಿಂದ 21ರವರೆಗೆ ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಶೃಂಗಸಭೆಯಲ್ಲಿ ಇಂಗ್ಲೆಂಡ್‌, ಅಮೆರಿಕ, ಜಪಾನ್‌, ಭಾರತ, ಫ್ರಾನ್ಸ್‌ , ಜರ್ಮನಿ, ಕೆನಡಾ, ಇಟಲಿ ದೇಶದ ನಾಯಕರುಗಳು ಭಾಗವಹಿಸಿದ್ದರು. ಸಭೆಯಲ್ಲಿ ಆಹಾರ, ರಸಗೊಬ್ಬರ, ಇಂಧನ ಭದ್ರತೆ ಸೇರಿದಂತೆ ಜಾಗತಿಕವಾಗಿ ಎದರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಲಾಗಿದೆ.

ಶಾಂತಿ ಸ್ಮಾರಕ ವಸ್ತು ಸಂಗ್ರಹಾಲಯ

1955ರಲ್ಲಿ ಸ್ಥಾಪಿತವಾದ ಈ ಸಂಗ್ರಹಾಲಯದ ಮೂಲ ಉದ್ದೇಶ ಅಣುಬಾಂಬ್ ದಾಳಿಯ ಭೀಕರತೆಯನ್ನು ಪ್ರದರ್ಶಿಸುವುದು ಹಾಗೂ ವಿಶ್ವಶಾಂತಿಯ ಪ್ರತಿಪಾದನೆ, ಅಣುಶಾಸ್ತ್ರ ಮುಕ್ತ ವಿಶ್ವಶಾಂತಿಗಾಗಿ ಜಪಾನ್‌ ನಡೆಸುತ್ತಿರುವ ಅಂದೋಲನದ ಬಗ್ಗೆ ಸವಿವರ ಮಾಹಿತಿ ಇಲ್ಲಿ ಸಿಗುತ್ತದೆ. ಹಿರೋಷಿಮಾ ದಾಳಿ ನಡೆದ ಸಮಯ ಬೆಳಗಿನ 8.15ಕ್ಕೆ ತಟಸ್ಥಗೊಂಡ ಗಡಿಯಾರಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ದಾಳಿಗೆ ಸಂಬಂಧಪಟ್ಟ ಚಲನಚಿತ್ರಗಳ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಬಹುತೇಕ ಎಲ್ಲಾ ದೇಶಗಳ ಭಾಷೆಗಳ ವಿವರಣೆಯೊಂದಿಗೆ ದೊರೆಯುತ್ತದೆ. ದಾಳಿಗೆ ತುತ್ತಾದವರು ಧರಿಸಿದ್ದ ಬಟ್ಟೆ, ಗಡಿಯಾರಗಳು, ಬೂಟು, ಅವರ ತಲೆ ಕೂದಲು ಮುಂತಾದವುಗಳನ್ನು ಸಂಗ್ರಹಿಸಿಡಲಾಗಿದೆ. ಅಣುಬಾಂಬ್ ಮುಕ್ತ ಭೂಮಿಯನ್ನು ಕಾಣುವಂತಾಗಲೆಂಬ ಆಶಯ ಹೊತ್ತು ನಿರಂತರವಾಗಿ ಉರಿಯುತ್ತಿರುವ ಶಾಂತಿ ಜ್ಯೋತಿ ಹಾಗೂ ಅದರ ಸಮೀಪದಲ್ಲಿ ಅಣುಬಾಂಬ್ ಗುಮ್ಮಟವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT