ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ್ಲಿನ್‌ನಲ್ಲಿ ಪ್ಯಾಲೆಸ್ಟೀನ್ ಪರ ಪ್ರತಿಭಟನೆ: ಪೊಲೀಸರ ತಡೆ

Published 7 ಮೇ 2024, 16:13 IST
Last Updated 7 ಮೇ 2024, 16:13 IST
ಅಕ್ಷರ ಗಾತ್ರ

ಆಮ್‍ಸ್ಟರ್‌ಡ್ಯಾಮ್‌ (ನೆದರ್ಲೆಂಡ್ಸ್‌)(ಎಪಿ): ಮಂಗಳವಾರ ಮುಂಜಾನೆ ಜರ್ಮನಿಯ ಬರ್ಲಿನ್‌ ಮುಕ್ತ ವಿಶ್ವವಿದ್ಯಾಲಯದಲ್ಲಿ ನೂರಾರು ವಿದ್ಯಾರ್ಥಿಗಳು ಪ್ಯಾಲೆಸ್ಟೀನ್ ಪರ ಪ್ರತಿಭಟನೆಯನ್ನು ನಡೆಸಿದ್ದು, ಅದಕ್ಕೆ ಜರ್ಮನ್ ಪೊಲೀಸರು ತಡೆಯೊಡ್ಡಿದ್ದಾರೆ.

ಗಾಜಾದಲ್ಲಿ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವಂತೆ ಕೋರಿ ಪ್ರತಿಭಟನಕಾರರು ಸುಮಾರು 20 ಟೆಂಟ್‌ಗಳನ್ನು ಹಾಕಿಕೊಂಡು ಟೆಂಟ್‌ಗಳ ಸುತ್ತಲೂ ಮಾನವ ಸರಪಳಿ ನಿರ್ಮಿಸಿದ್ದಾರೆ ಮತ್ತು ಹೆಚ್ಚಿನವರು ಮಾಸ್ಕ್ ಧರಿಸಿ ಪ್ಯಾಲೆಸ್ಟೀನ್ ಪರ ಘೋಷಣೆಗಳನ್ನು ಕೂಗಿದ್ದಾರೆ. 

ಪೊಲೀಸರು ಕ್ಯಾಂಪಸ್‌ನಿಂದ ಹೊರಹೋಗುವಂತೆ ಧ್ವನಿವರ್ಧಕಗಳ ಮೂಲಕ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. 

ಮಂಗಳವಾರ ಮುಂಜಾನೆ, ಡಚ್ ಪೊಲೀಸರು ಆಮ್‍ಸ್ಟರ್‌ಡ್ಯಾಮ್‌ ವಿಶ್ವವಿದ್ಯಾಲಯದಲ್ಲಿ ಇದೇ ರೀತಿಯ ಪ್ಯಾಲೆಸ್ಟೀನಿಯನ್ ಪರವಾದ ಪ್ರದರ್ಶನ ಶಿಬಿರವನ್ನು ತಡೆದು ಸುಮಾರು 125 ಪ್ರತಿಭಟನಕಾರರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT