ನಿತ್ರಾ (ಸ್ಲೊವಾಕಿಯಾ): ಸ್ಲೊವಾಕಿಯಾ ಭೇಟಿಯಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ‘ಕಾನ್ಸ್ಟಂಟೈನ್ ದಿ ಫಿಲಾಸಫರ್ ವಿಶ್ವವಿದ್ಯಾಲಯ’ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.

ನಾಲ್ಕು ದಿನಗಳ ಸ್ಲೊವಾಕಿಯಾ ಮತ್ತು ಪೋರ್ಚುಗಲ್ ಭೇಟಿಗೆ ತೆರಳಿರುವ ಮುರ್ಮು ಅವರು ವಿಶ್ವವಿದ್ಯಾಲಯದ ಕ್ಯಾಂಪಸ್ಗೆ ಬಂದು ಗೌರವವನ್ನು ಸ್ವೀಕರಿಸಿದರು.

ಸಾರ್ವಜನಿಕ ಸೇವೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದನ್ನು ಪರಿಗಣಿಸಿ ವಿಶ್ವವಿದ್ಯಾಲಯವು ಮುರ್ಮು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದೆ.

ಶಿಕ್ಷಣ, ಮಹಿಳಾ ಸಬಲೀಕರಣ, ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ನೀಡಿದ ಕೊಡುಗೆಗಾಗಿ ಅವರನ್ನು ಗೌರವಿಸಲಾಗಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ಹೇಳಿದೆ.

ಗೌರವ ಸ್ವೀಕರಿಸಿ ಮಾತನಾಡಿದ ಮುರ್ಮು, ‘ಭಾರತದ 140 ಕೋಟಿ ಜನರ ಪರವಾಗಿ ಈ ಗೌರವವನ್ನು ಸ್ವೀಕರಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
.ಸ್ಲೊವಾಕಿಯಾ: ರಾಮಾಯಣ ಬೊಂಬೆಯಾಟ ವೀಕ್ಷಿಸಿದ ಮುರ್ಮು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.