ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌: ಪತ್ರಕರ್ತರಿಗೆ ಏಳು ವರ್ಷ ಜೈಲು

Last Updated 3 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಯಾಂಗೂನ್‌: ರಾಯಿಟರ್ಸ್‌ನ ಇಬ್ಬರು ಪತ್ರಕರ್ತರಿಗೆ ರಾಜ್ಯ ರಹಸ್ಯ ಕಾಯ್ದೆ ಉಲ್ಲಂಘನೆ ಅಡಿ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯ ಆದೇಶ ನೀಡಿದೆ. ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಹೊರಗೋಡಿಸುವ ಸಂದರ್ಭದಲ್ಲಿ ವರದಿ ಮಾಡುವಾಗ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಈ ಪತ್ರಕರ್ತರು ನಡೆದುಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ವಾ ಲೋನ್‌ (32) ಮತ್ತು ಕ್ವಾವ್ ಸೊ ಊ (28) ಶಿಕ್ಷೆಗೊಳಗಾದ ಪತ್ರಕರ್ತರು. ಕಳೆದ ಡಿಸೆಂಬರ್‌ನಿಂದ ಇಬ್ಬರು ಕಾರಾಗೃಹವಾಸದಲ್ಲಿದ್ದು, ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ.

ರೋಹಿಂಗ್ಯಾ ಮುಸ್ಲಿಮರನ್ನುಬಾಂಗ್ಲಾದೇಶಕ್ಕೆ ಓಡಿಸುವ ಸಂದರ್ಭದಲ್ಲಿ ಮ್ಯಾನ್ಮಾರ್‌ನ ಭದ್ರತಾ ಪಡೆಗಳ ಯೋಧರು ಅತ್ಯಾಚಾರ, ಹತ್ಯೆ ನಡೆಸಿದ್ದಾರೆ ಎಂದು ಪತ್ರಕರ್ತರು ವರದಿ ಮಾಡಿದ್ದರು.

‘ಸರ್ಕಾರ ನಮ್ಮನ್ನು ಶಿಕ್ಷೆಗೆ ಗುರಿಯಾಗಿಸಬಹುದು. ಆದರೆ, ಜನರ ಕಿವಿಗಳು ಹಾಗೂ ಕಣ್ಣನ್ನು ಮುಚ್ಚಲು ಸಾಧ್ಯವಿಲ್ಲ’ ಎಂದು ಕ್ವಾ ಸೊ ಊ ಹೇಳಿದ್ದರೆ, ‘ನಾವು ಈ ತೀರ್ಪನ್ನು ಧೈರ್ಯದಿಂದ ಎದುರಿಸುತ್ತೇವೆ’ ಎಂದು ವಾ ಲೋನ್‌ ಹೇಳಿದ್ದಾರೆ.

‘ಸುಳ್ಳು ಆರೋಪದ ಮೇಲೆ ಪತ್ರಕರ್ತರನ್ನು ಬಂಧಿಸಲಾಗಿದೆ. ಈ ತೀರ್ಪಿನ ವಿರುದ್ಧ ನಾವು ಮೇಲ್ಮನವಿ ಸಲ್ಲಿಸುತ್ತೇವೆ’ ಎಂದು ಪತ್ರಕರ್ತರ ಪರ ವಕೀಲರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT