ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

92 ನೇ ವಯಸ್ಸಿನಲ್ಲಿ 5 ನೇ ಮದುವೆಗೆ ಸಿದ್ದವಾದ ಉದ್ಯಮಿ ರೂಪರ್ಟ್ ಮುರ್ಡೋಕ್!

ಮಾಧ್ಯಮ ಉದ್ಯಮಿ ಅಮೆರಿಕದ ರೂಪರ್ಟ್ ಮುರ್ಡೋಕ್ ಅವರು ತಮ್ಮ 92ರ ಇಳಿವಯಸ್ಸಿನಲ್ಲೂ ಮತ್ತೊಂದು ಮದುವೆಗೆ ಸಿದ್ದತೆ ನಡೆಸಿದ್ದಾರೆ.
Published 9 ಮಾರ್ಚ್ 2024, 6:42 IST
Last Updated 9 ಮಾರ್ಚ್ 2024, 6:42 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಮಾಧ್ಯಮ ಉದ್ಯಮಿ ಅಮೆರಿಕದ ರೂಪರ್ಟ್ ಮುರ್ಡೋಕ್ ಅವರು ತಮ್ಮ 92ರ ಈ ಇಳಿವಯಸ್ಸಿನಲ್ಲೂ ಮತ್ತೊಂದು ಮದುವೆಗೆ ಸಿದ್ದತೆ ನಡೆಸಿದ್ದಾರೆ.

ಹೌದು, Elena Zhukova ಎನ್ನುವ ರಷ್ಯಾ ಮೂಲದ 67 ವರ್ಷದ ಅಮೆರಿಕನ್ ಮಹಿಳೆಯನ್ನು ರೂಪರ್ಟ್ ಅವರು ಬರುವ ಜುಲೈನಲ್ಲಿ ಮದುವೆಯಾಗಲಿದ್ದಾರೆ ಎಂದು ಅವರ ತಂಡ ಮಾಧ್ಯಮಗಳಿಗೆ ತಿಳಿಸಿದೆ.

ಎಲೆನಾ ಅವರು ಮಾಜಿ ಜೀವ ರಸಾಯನಶಾಸ್ತ್ರಜ್ಞೆ ಹಾಗೂ ಕಳೆದ ಕೆಲ ತಿಂಗಳುಗಳಿಂದ ರೂಪರ್ಟ್ ಅವರಿಗೆ ಗರ್ಲ್‌ಫ್ರೆಂಡ್ ಆಗಿ ಗುರುತಿಸಿಕೊಂಡಿದ್ದರು.

ಈ ಇಬ್ಬರ ಮದುವೆ ಕ್ಯಾಲಿಪೋರ್ನಿಯಾದ ರೂಪರ್ಟ್ ಅವರ ಫಾರ್ಮ್‌ಹೌಸ್ ವೈನ್‌ಯಾರ್ಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎನ್ನಲಾಗಿದೆ.

ಈಗಾಗಲೇ ರೂಪರ್ಟ್ ಅವರು ನಾಲ್ಕು ಮದುವೆಯಾಗಿದ್ದಾರೆ. ಅವರಿಗೆ ಒಟ್ಟು ಆರು ಮಕ್ಕಳಿದ್ದಾರೆ. ಕಳೆದ ವರ್ಷಾರಂಭದಲ್ಲಿ ಆನ್ನಾ ಲೆಸ್ಲಿ ಸ್ಮಿತ್ ಎನ್ನುವ ಮಹಿಳೆಯನ್ನು ಅವರು ಮದುವೆಯಾಗುವುದಾಗಿ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಆ ಮದುವೆ ಮುರಿದು ಬಿದ್ದಿತ್ತು.

ರೂಪರ್ಟ್ ಅವರು ದಿ ವಾಲ್‌ ಸ್ಟ್ರೀಟ್ ಜರ್ನಲ್, ಫಾಕ್ಸ್ ನ್ಯೂಸ್ ಅಂತಹ ಜಾಗತಿಕ ಮಾಧ್ಯಮ ಕಂಪನಿಗಳ ಒಡೆತನ ಪ್ರಮುಖವಾಗಿ ಹೊಂದಿದ್ದಾರೆ. ಸದ್ಯ ಉದ್ಯಮ ಜಗತ್ತಿಗೆ ವಿದಾಯ ಹೇಳಿರುವ ಅವರು ತಮ್ಮ ಹಿರಿಯ ಮಗ ಲಾಚ್‌ಲಾನ್ ಅವರಿಗೆ ಹೊಣೆಗಾರಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾ ಮೂಲದ ಅಮೆರಿಕನ್ ಉದ್ಯಮಿಯಾಗಿ ಬೆಳೆದಿರುವ ರೂಪರ್ಟ್ ಅವರು ಸುಮಾರು ₹ 2.50 ಲಕ್ಷ ಕೋಟಿ ಆಸ್ತಿಯ ಮಾಲೀಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT