ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌: ಮೈಕೊಲೈವ್‌ ನಗರದ ಹೋಟೆಲ್‌ ಮೇಲೆ ರಷ್ಯಾ ಡ್ರೋನ್‌ ದಾಳಿ

Published 28 ಏಪ್ರಿಲ್ 2024, 13:49 IST
Last Updated 28 ಏಪ್ರಿಲ್ 2024, 13:49 IST
ಅಕ್ಷರ ಗಾತ್ರ

ಕೀವ್‌: ಉಕ್ರೇನ್‌ನ ಮೈಕೊಲೈವ್‌ ನಗರದ ಮೇಲೆ ರಷ್ಯಾ ಭಾನುವಾರ ನಸುಕಿನಲ್ಲಿ ಡ್ರೋನ್‌ ದಾಳಿ ನಡೆಸಿದೆ.

ಡ್ರೋನ್‌ ದಾಳಿಯಲ್ಲಿ ನಗರದ ಪ್ರಮುಖ ಹೋಟೆಲ್‌ವೊಂದು ಬೆಂಕಿ ಹೊತ್ತಿ ಉರಿದಿದೆ. ಅಲ್ಲದೆ, ಪ್ರಮುಖ ಇಂಧನ ಮೌಲಸೌಕರ್ಯಗಳು ಹಾನಿಗೊಂಡಿವೆ.  

ಮೈಕೊಲೈವ್ ಪ್ರಾಂತ್ಯದ ಗವರ್ನರ್ ವಿಟಾಲಿ ಕಿಮ್, ರಷ್ಯಾದ ಡ್ರೋನ್‌ಗಳಿಂದ ರಾಜಧಾನಿಯ ಹೋಟೆಲ್‌ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲಾಗಿದೆ. ಆದರೆ, ಈ ದಾಳಿಯಲ್ಲಿ ಹೋಟೆಲ್‌ಗೆ ಭಾರಿ ಹಾನಿ ಆಗಿದೆ. ಅಲ್ಲದೆ, ವಿದ್ಯುತ್‌ ಉತ್ಪಾದನೆಯ ಮೂಲಸೌಕರ್ಯಗಳಿಗೂ ಹಾನಿ ಉಂಟಾಗಿದೆ. ಆದರೆ, ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಡ್ರೋನ್‌ಗಳನ್ನು ಜೋಡಿಸಿದ್ದ ಹಡಗುಕಟ್ಟೆಯನ್ನು ಗುರಿಯಾಗಿಸಿ ಮೈಕೊಲೈವ್‌ ನಗರದ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೆ, ಉಕ್ರೇನ್‌ ಪರ ಯುದ್ಧ ಮಾಡಲು ಬಂದಿರುವ ವಿದೇಶಿ ಕೂಲಿ ಸೈನಿಕರು ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದರಿಂದ ಆ ಹೋಟೆಲ್‌ ಮೇಲೆ ಡ್ರೋನ್‌ ದಾಳಿ ಮಾಡಲಾಗಿದೆ ಎಂದು ರಷ್ಯಾದ ಸುದ್ದಿಸಂಸ್ಥೆ ‘ರಿಯಾ’ ವರದಿ ಮಾಡಿದೆ.  

ದೇಶದ ನೈರುತ್ಯದ ನಾಲ್ಕು ಪ್ರದೇಶಗಳಲ್ಲಿ ರಾತ್ರಿ ವೇಳೆ ಉಕ್ರೇನ್‌ನ 17 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಭಾನುವಾರ ಬೆಳಿಗ್ಗೆ ಹೇಳಿದೆ.

ಉಕ್ರೇನ್‌ ಗಡಿಯಿಂದ ಉತ್ತರಕ್ಕೆ 230 ಕಿ.ಮೀ. ದೂರದ ಕೈಗಾರಿಕಾ ಪಟ್ಟಣ ಲ್ಯುಡಿನೊವೊದಲ್ಲಿನ ತೈಲ ಸಂಗ್ರಹಾಗಾರದ ಬಳಿ 3 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಗವರ್ನರ್ ವ್ಲಾಡಿಸ್ಲಾವ್ ಶಾಪ್ಶಾ ಹೇಳಿದ್ದಾರೆ.

ಶನಿವಾರ ರಾತ್ರಿ ರಷ್ಯಾ ಪಡೆಗಳು ನಡೆಸಿದ ಶೆಲ್ ದಾಳಿಯಿಂದ ಉಕ್ರೇನ್‌ನಾದ್ಯಂತ ಕನಿಷ್ಠ ಏಳು ನಾಗರಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ.

ಡೊನೆಟ್‌ಸ್ಕ್‌ ಮತ್ತು ಹಾರ್ಕಿವ್‌ ಪ್ರಾಂತ್ಯದಲ್ಲಿ ಇತ್ತೀಚಿನ ವಾರಗಳಲ್ಲಿ ಕದನ ಭೀಕರತೆ ಪಡೆದಿದೆ. ಶಸ್ತ್ರಾಸ್ತ್ರ ಕೊರತೆ ಎದುರಾಗಿರುವುದು ಉಕ್ರೇನ್‌ ಪಡೆಗಳಿಗೆ ಈ ಭಾಗದಲ್ಲಿ ರಕ್ಷಣೆ ಮಾಡಿಕೊಳ್ಳುವುದು ಕಷ್ಟವಾಗಿದೆ. ರಷ್ಯಾ ಪಡೆಗಳು ಮುಂಬರುವ ವಾರಗಳಲ್ಲಿ ಗಮನಾರ್ಹ ಲಾಭ ಗಳಿಸಬಹುದು ಎಂದು ಅಮೆರಿಕದ ಚಿಂತಕರ ಚಾವಡಿಯೊಂದು ವಿಶ್ಲೇಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT