ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜ್ಜರ್‌ ಹತ್ಯೆ: ಕೆನಡಾದಿಂದ ನಿರ್ದಿಷ್ಟ ಪುರಾವೆ ಕೇಳಿದ ಸಚಿವ ಜೈಶಂಕರ್‌

Published 16 ನವೆಂಬರ್ 2023, 4:41 IST
Last Updated 16 ನವೆಂಬರ್ 2023, 4:41 IST
ಅಕ್ಷರ ಗಾತ್ರ

ಲಂಡನ್‌: ಖಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂಬ ಆರೋಪಗಳಿಗೆ ಕೆನಡಾ ಸರ್ಕಾರ ಪುರಾವೆಗಳನ್ನು ಒದಗಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಒತ್ತಾಯಿಸಿದ್ದಾರೆ.

ಈ ಪ್ರಕರಣದಲ್ಲಿ ಭಾರತ ಸರ್ಕಾರ ತನಿಖೆಯಿಂದ ಹಿಂದೆ ಸರಿಯುತ್ತಿಲ್ಲ, ನಿಜ್ಜರ್‌ ಹತ್ಯೆ ಕುರಿತು ನಿರ್ದಿಷ್ಟ ಮತ್ತು ನಂಬಲರ್ಹ ಮಾಹಿತಿ ಇದ್ದರೆ ತಿಳಿಸಿ. ಅದನ್ನು ಪರಿಗಣಿಸಲು ನಾವು ಮುಕ್ತರಾಗಿದ್ದೇವೆ ಎಂದು ಅವರು ಹೇಳಿದರು. 

ಬ್ರಿಟನ್‌ಗೆ ಐದು ದಿನಗಳ ಪ್ರವಾಸ ಕೈಗೊಂಡಿರುವ ಅವರು ಹಿರಿಯ ಪತ್ರಕರ್ತ ಲಿಯೋನೆಲ್ ಬಾರ್ಬರ್ ಅವರೊಂದಿಗಿನ ಸಂವಾದದ ವೇಳೆ ಈ ಮಾಹಿತಿ ನೀಡಿದ್ದಾರೆ.

ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು ಭಾರತದ ವಿರುದ್ಧ ಮಾಡಿರುವ ಆರೋಪಗಳ ಕುರಿತು ಲಿಯೋನೆಲ್ ಬಾರ್ಬರ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಇಂತಹ ಕೃತ್ಯದಲ್ಲಿ ತೊಡಗುವುದು ಭಾರತದ ನೀತಿಯಲ್ಲ, ಹತ್ಯೆಗೆ ಸಂಬಂಧಿಸಿದಂತೆ ‘ನಿರ್ದಿಷ್ಟ ಮಾಹಿತಿ ಒದಗಿಸಿದರೆ ಅದನ್ನು ಪರಿಗಣಿಸಲು ಭಾರತ ಸಿದ್ಧವಿದೆ, ನಾವು ತನಿಖೆಯಿಂದ ಹಿಂದೆ ಸರಿಯುತ್ತಿಲ್ಲ ಎಂದರು. ಇದನ್ನು ಕೆನಡಾಗೆ ಈಗಾಗಲೇ ತಿಳಿಸಿರುವುದಾಗಿ ಜೈಶಂಕರ್‌ ಹೇಳಿದ್ದಾರೆ.

ನಿರ್ದಿಷ್ಟ ಪುರಾವೆಯನ್ನು ಯಾರು ನೀಡಿದರೂ ಭಾರತ ಅದನ್ನು ಪರಿಗಣಿಸುತ್ತದೆ. ಅದು ಕೆನಡಾ ವಿಷಯಕ್ಕೆ ಮಾತ್ರವಲ್ಲ, ಯಾವುದೇ ವಿವಾದಿತ ಘಟನೆ ಕುರಿತು ಯಾರಾದರೂ ನಿರ್ದಿಷ್ಟ ಮಾಹಿತಿ ನೀಡಿದರೆ ಖಂಡಿತ ಪರಿಗಣಿಸಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT