ಮೇವಿಲ್, ನ್ಯೂಯಾರ್ಕ್: ಭಾರತ ಮೂಲದ ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಚಾಕುವಿನಿಂದ ಇರಿದ ಪ್ರಕರಣದ ಅಪರಾಧಿ ಹಾದಿ ಮಟರ್ಗೆ (27) ಎರಡೂವರೆ ವರ್ಷಗಳ ಬಳಿಕ ಶಿಕ್ಷೆ ಘೋಷಣೆಯಾಗಿದೆ.

ಶುಕ್ರವಾರ ಬೆಳಿಗ್ಗೆ ಪಶ್ಚಿಮ ನ್ಯೂಯಾರ್ಕ್ನ ಷಟೌಕ್ವಾ ನ್ಯಾಯಾಲಯದ ನ್ಯಾಯಾಧೀಶರು ಅಪರಾಧಿ ಹಾದಿ ಮಟರ್ಗೆ 25 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದರು.

ಪ್ರಕರಣದ ಮುಖ್ಯ ಸಾಕ್ಷಿಯಾಗಿರುವ ರಶ್ದಿ ಅವರು ಹಾದಿ ಮಟರ್ ವಿರುದ್ಧ ಸಾಕ್ಷ್ಮಿ ನುಡಿದಿದ್ದರು. ಕೃತ್ಯ ನಡೆದ ದಿನ ಮತ್ತು ನಂತರದ ಬೆಳವಣಿಗೆ ಕುರಿತು ರಶ್ದಿ ಅವರು ಬರೆದಿರುವ ಪುಸ್ತಕವು ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷ್ಯ ಆಗಿ ಬದಲಾಯಿತು.

ಆದೇಶ ನೀಡುವ ಮುನ್ನ ನ್ಯಾಯಾಧೀಶರು ಹಾದಿ ಮಟರ್ ಜೊತೆ ಎರಡು ಗಂಟೆಗಳ ಕಾಲ ಚರ್ಚಿಸಿದರು.

ಕೊಲೆ ಯತ್ನ ಮತ್ತು ಹಲ್ಲೆ ಪ್ರಕರಣದಲ್ಲಿ ಮಟರ್ ತಪ್ಪಿತಸ್ಥ ಎಂದು ನ್ಯಾಯಾಲಯ ಫೆಬ್ರುವರಿಯಲ್ಲಿ ಘೋಷಿಸಿತ್ತು. ನ್ಯಾಯಾಧೀಶರು ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸುವ ಸಮಯದಲ್ಲಿ ರಶ್ದಿ ಅವರು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ.

‘ರಶ್ದಿ ಅವರ ಕೊಲೆಗೆ ಯತ್ನಿಸಿದ್ದಕ್ಕೆ ಅಪರಾಧಿಗೆ ಗರಿಷ್ಠ 25 ವರ್ಷಗಳ ಜೈಲು ಮತ್ತು ಅದೇ ವೇದಿಕೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ಗಾಯಗೊಳಿಸಿದ್ದಕ್ಕೆ ಏಳು ವರ್ಷ ಜೈಲು ವಿಧಿಸಲಾಗಿದೆ. ಎರಡೂ ಸಂತ್ರಸ್ತರು ಒಂದೇ ಘಟನೆಯಲ್ಲಿ ಗಾಯಗೊಂಡಿರುವ ಕಾರಣ ಅಪರಾಧಿ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕು’ ಎಂದು ಷಟೌಕ್ವ ಕೌಂಟಿಯ ಜಿಲ್ಲಾ ಅಟಾರ್ಜಿ ಜೇಸನ್ ಸ್ಮಿತ್ ಹೇಳಿದ್ದಾರೆ.

2022ರ ಆಗಸ್ಟ್ 12ರಂದು ನ್ಯೂಯಾರ್ಕ್ ಸಮೀಪದ ಷಟೌಕ್ವಾ ಎಂಬಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೇರಿ ರಶ್ದಿ ಅವರ ಮೇಲೆ ಹಾದಿ ಮಟರ್ ಚಾಕುವಿನಿಂದ ಇರಿದಿದ್ದ. ದಾಳಿಯಿಂದಾಗಿ ರಶ್ದಿ ಅವರು ಬಲಗಣ್ಣು ಮತ್ತು ಕೈಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ.

ರಶ್ದಿ ಅವರು ಬರೆದ ‘ಸಟಾನಿಕ್ ವರ್ಸಸ್’ ಎಂಬ ಕಾದಂಬರಿಯಲ್ಲಿ ಇಸ್ಲಾಂ ಧರ್ಮಕ್ಕೆ ಅಪಮಾನವಾಗಿದೆ ಎಂದು ಆರೋಪಿಸಿ ಅವರ ಹತ್ಯೆಗೆ ಇರಾನ್ 1989ರಲ್ಲಿ ಫತ್ವಾ ಹೊರಡಿಸಿತ್ತು. ಇದರಿಂದ ಪ್ರೇರಿತನಾಗಿದ್ದ ಹಾದಿ ಮಟರ್ ಸಲ್ಮಾನ್ ರಶ್ದಿ ಮೇಲೆ ಭೀಕರ ದಾಳಿ ನಡೆಸಿದ್ದ. ಈ ಘಟನೆ ಜಾಗತಿಕವಾಗಿ ಸದ್ದು ಮಾಡಿತ್ತು.

ಹಾದಿ ಮಟರ್ ಅಮೆರಿಕನ್ ಮುಸ್ಲಿಂ ನಾಗರಿಕನಾಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.