ಇಸ್ಲಾಮಾಬಾದ್: 2 ಬಿಲಿಯನ್ ಡಾಲರ್ನಷ್ಟು( 1,79,98,70,00,000 ರೂಪಾಯಿ) ಸೌದಿ ಅರೇಬಿಯಾದ ಸಾಲವನ್ನು ಜೆಎಫ್–17 ಫೈಟರ್ ಜೆಟ್ಗಳ ಒಪ್ಪಂದವಾಗಿ ಪರಿವರ್ತಿಸಲು ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದೇಶಗಳು ಮಾತುಕತೆ ನಡೆಸಿವೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷ ಎರಡೂ ದೇಶಗಳು ಪರಸ್ಪರ ಮಿಲಿಟರಿ ಸಹಕಾರ ಒಪ್ಪಂದಕ್ಕೆ ಬಂದಿದ್ದವು. ಅದಾದ ಬಳಿಕ, ಎರಡೂ ದೇಶಗಳ ನಡುವೆ ಮಿಲಿಟರಿ ಸಹಕಾರ ಗಾಢವಾಗಿದೆ.

ಪಾಕಿಸ್ತಾನ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಡುವೆಯೇ ಸೌದಿ ಅರೇಬಿಯಾ ತಮ್ಮ ಭದ್ರತಾ ಒಡಂಬಡಿಕೆಯನ್ನು ವಿಸ್ತರಿಸುತ್ತಿದ್ದು, ಇದರ ನಡುವೆಯೇ ಎರಡೂ ದೇಶಗಳು ಮಿಲಿಟರಿ ಸಹಕಾರವನ್ನು ಹೇಗೆ ವೃದ್ಧಿಸುತ್ತಿವೆ ಎಂಬುದನ್ನು ಒಪ್ಪಂದ ಒತ್ತಿ ಹೇಳಿದೆ.

ದೋಹಾದಲ್ಲಿ ಹಮಾಸ್ ಅನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದ ಬಳಿಕ ಗಲ್ಫ್ ದೇಶಗಳಲ್ಲಿ ತಲ್ಲಣ ಉಂಟಾಗಿದ್ದು, ಇದರ ಬೆನ್ನಲ್ಲೇ ಸೌದಿ ಮತ್ತು ಪಾಕಿಸ್ತಾನ ನಡುವೆ ಒಪ್ಪಂದ ಆಗಿದೆ.

ಮಾತುಕತೆಯು ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಜೆಎಫ್–17 ಫೈಟರ್ ಜೆಟ್ಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ಒಂದು ಮೂಲ ತಿಳಿಸಿದೆ.

ಒಪ್ಪಂದವು ಒಟ್ಟು 4 ಬಿಲಿಯನ್ ಡಾಲರ್ ಮೌಲ್ಯದ್ದಾಗಿದ್ದು, ಸಾಲ ಪರಿವರ್ತನೆಯ ಜೊತೆಗೆ ಹೆಚ್ಚುವರಿಯಾಗಿ 2 ಬಿಲಿಯನ್ ಡಾಲರ್ ಉಪಕರಣಗಳ ಖರೀದಿಗೆ ಸಂಬಂಧಿಸಿದ್ದಾಗಿದೆ ಎಂದು ಮತ್ತೊಂದು ಮೂಲ ತಿಳಿಸಿದೆ.

ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥ ಜಹೀರ್ ಅಹ್ಮದ್ ಬಾಬರ್ ಸಿಧು ಈ ವಾರ ಸೌದಿ ಅರೇಬಿಯಾದಲ್ಲಿ ದ್ವಿಪಕ್ಷೀಯ ರಕ್ಷಣಾ ಸಹಕಾರ, ಪ್ರಾದೇಶಿಕ ಭದ್ರತಾ ಪರಿಸರ ಮತ್ತು ಸಹಯೋಗದ ಭವಿಷ್ಯದ ಮಾರ್ಗಗಳ ಕುರಿತು ಟರ್ಕಿಯ ವಾಯುಪಡೆಯ ಮುಖ್ಯಸ್ಥರೊಂದಿಗೆ ಚರ್ಚಿಸಲಿದ್ದಾರೆ ಎಂದು ಪಾಕಿಸ್ತಾನದ ಸೇನೆ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.