ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಯೋಲ್ | ಕಸದ ಬಲೂನ್‌ ವಿರುದ್ಧ ಪ್ರತೀಕಾರಕ್ಕೆ ನಿರ್ಧಾರ

Published 9 ಜೂನ್ 2024, 15:44 IST
Last Updated 9 ಜೂನ್ 2024, 15:44 IST
ಅಕ್ಷರ ಗಾತ್ರ

ಸಿಯೋಲ್: ಗಡಿ ಪ್ರದೇಶಗಳಲ್ಲಿ ಕಸ ಮತ್ತು ಗೊಬ್ಬರ ತುಂಬಿದ ಒಂದು ಸಾವಿರ ಬಲೂನ್‌ಗಳನ್ನು ಹಾರಿಬಿಟ್ಟ ಉತ್ತರ ಕೊರಿಯಾದ ವಿರುದ್ಧ ದಕ್ಷಿಣ ಕೊರಿಯಾ ಪ್ರತೀಕಾರಕ್ಕೆ ಮುಂದಾಗಿದೆ. ತಾನು ಧ್ವನಿವರ್ಧಕಗಳಲ್ಲಿ ಉತ್ತರ ಕೊರಿಯಾ ವಿರೋಧಿ ಪ್ರಚಾರ ಮಾಡುವುದಾಗಿ ಘೋಷಿಸಿದೆ.   

ಇದರಿಂದ ಉತ್ತರ ಕೊರಿಯಾ ಕೆರಳುವ ಸಾಧ್ಯತೆಯಿದ್ದು, ಅದು ಪ್ರತೀಕಾರದ ಭಾಗವಾಗಿ ಮಿಲಿಟರಿ ಕಾರ್ಯಾಚರಣೆ ಆರಂಭಿಸುವ ಸಂಭವ ಇದೆ. ಎರಡೂ ಬದ್ಧವೈರಿ ದೇಶಗಳ ನಡುವೆ ಇದು ಮನಸ್ತಾಪ ಹೆಚ್ಚಿಸಲಿದೆ. ಅಣ್ವಸ್ತ್ರ ಹೊಂದಿರುವ ಉತ್ತರ ಕೊರಿಯಾ ಬಿಕ್ಕಟ್ಟನ್ನು ತೀವ್ರಗೊಳಿಸಬಹುದು ಎನ್ನಲಾಗುತ್ತಿದೆ. 

ದಕ್ಷಿಣ ಕೊರಿಯಾ ರಾಷ್ಟ್ರೀಯ ಭದ್ರತಾ ನಿರ್ದೇಶಕ ಚಾಂಗ್–ಹೊ–ಜಿನ್ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದ ನಂತರ ಅಧಿಕಾರಿಗಳು ಧ್ವನಿವರ್ಧಕಗಳ ಮೂಲಕ ಪ್ರಚಾರ ಕಾರ್ಯ ಆರಂಭಿಸಲು ನಿರ್ಧರಿಸಲಾಯಿತು ಎಂದು ಸಿಯೋಲ್‌ನ ಅಧ್ಯಕ್ಷೀಯ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಉತ್ತರ ಕೊರಿಯಾ ನೂರಾರು ಬಲೂನ್‌ಗಳನ್ನು ದಕ್ಷಿಣ ಕೊರಿಯಾದೊಳಗೆ ಹಾರಿಸುವುದನ್ನು ಮುಂದುವರೆಸಿದ್ದು, ಮೇ ತಿಂಗಳಿನಿಂದ ಮೂರನೇ ಬಾರಿಗೆ ಹೀಗೆ ಮಾಡಲಾಗುತ್ತಿದೆ ಎಂದು ದಕ್ಷಿಣ ಕೊರಿಯಾದ ಸೇನೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT