ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರಿ ಸ್ಫೋಟಕ್ಕೆ ಸಂಚು: ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿ 7 ಶಂಕಿತ ಉಗ್ರರ ಬಂಧನ

Published 6 ಜನವರಿ 2024, 12:42 IST
Last Updated 6 ಜನವರಿ 2024, 12:42 IST
ಅಕ್ಷರ ಗಾತ್ರ

ಲಾಹೋರ್: ನಿಷೇಧಿತ ಉಗ್ರ ಸಂಘಟನೆ ತೆಹ್ರೀಕ್-ಏ-ತಾಲಿಬಾನ್ ಜೊತೆ ನಂಟು ಹೊಂದಿದ್ದ ಏಳು ಶಂಕಿತ ಉಗ್ರರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶನಿವಾರ ಬಂಧಿಸಲಾಗಿದೆ.

ಈ ಮೂಲಕ ಭಾರಿ ಸ್ಫೋಟ ನಡೆಸಲು ತಯಾರಿ ನಡೆಸಿದ್ದ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಿರುವುದಾಗಿ ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ದಳ(ಸಿಟಿಡಿ) ತಿಳಿಸಿದೆ.

ಗುಪ್ತಚರ ಮಾಹಿತಿಯನ್ನಾಧರಿಸಿ ಕಳೆದೊಂದು ವಾರದಲ್ಲಿ ಪಂಜಾಬ್‌ ಪ್ರಾಂತ್ಯ ವಿವಿಧ ಜಿಲ್ಲೆಗಳಲ್ಲಿ 59 ಕಾರ್ಯಾಚರಣೆಗಳನ್ನು ನಡೆಸಿದ್ದು, 7 ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಬಂಧಿತರಿಂದ 2,195 ಗ್ರಾಂ ತೂಕದ ಸ್ಫೋಟಕ ಸೇರಿದಂತೆ ಇನ್ನಿತ್ತರ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಟಿಡಿ ಮಾಹಿತಿ ನೀಡಿದೆ.

‘ಪಂಜಾಬ್‌ ಪ್ರಾಂತ್ಯದಲ್ಲಿ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು, ಭಾರಿ ಅನಾಹುತ ಎಸಗಲು ಈ ಶಂಕಿತರು ಸಂಚು ರೂಪಿಸಿದ್ದರು. ಬಂಧಿತರ ವಿರುದ್ಧ 6 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವಾರವೂ ಸಹ ಪಂಜಾಬ್‌ನಲ್ಲಿ ತೆಹ್ರೀಕ್-ಏ-ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ವಿವಿಧ ಭಯೋತ್ಪಾದಕ ಸಂಘಟನೆಗಳ 22 ಶಂಕಿತ ಉಗ್ರರನ್ನು ಸಿಟಿಡಿ ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT