ಟೋಕಿಯೊ: ಇಲ್ಲಿನ ತೊಯೆಮಾ ಪ್ರಾಂತ್ಯದ ಕಡಲಲ್ಲಿ ಅಪರೂಪದ ಓರಾ ಮೀನುಗಳು (ಸಮುದ್ರ ಸರ್ಪ) ಪತ್ತೆಯಾಗಿದೆ. ಪುರಾಣಗಳ ಪ್ರಕಾರ, ಈ ಅಪರೂಪದ ಮೀನು ಸಿಕ್ಕರೆ ದೇಶದಲ್ಲಿ ಭೂಕಂಪ ಅಥವಾ ಸುನಾಮಿ ಉಂಟಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ ಎಂದು ‘ಸಿಎನ್ಎನ್‘ ವರದಿ ಮಾಡಿದೆ.

ಕಳೆದ ಶುಕ್ರವಾರ ಮೀನುಗಾರರ ಬಲೆಗೆ ಎರಡು ಓರಾ ಮೀನುಗಳು ಸಿಕ್ಕಿದ್ದು, ಇದರಿಂದ ಈ ಅವಧಿಯಲ್ಲಿ ಸಿಕ್ಕ ಇಂತಹ ಮೀನುಗಳ ಸಂಖ್ಯೆ ಏಳಕ್ಕೇರಿದೆ.

ತೊಯೆಮಾ ಕಡಲತೀರಕ್ಕೆ 10.5 ಅಡಿ ಉದ್ದದ ಮೀನು ಸಿಕ್ಕರೆ, ಇಮಿಜು ಬಂದರಿನ ಸಮೀಪ 13 ಅಡಿ ಉದ್ದದ ಮೀನು ಸಿಕ್ಕಿದೆ.

650ರಿಂದ 3,200 ಅಡಿ ಭಾಗದಲ್ಲಿ ಈ ಮೀನುಗಳು ಸಿಗುತ್ತವೆ. ಬೆಳ್ಳಿಯ ಹಾಗೂ ಕೆಂಪು ಮೈ ಬಣ್ಣ ಹೊಂದಿರುತ್ತವೆ. ಇವುಗಳನ್ನು ಸಮುದ್ರದಲ್ಲಿರುವ ಅರಮನೆಯ ಸಂದೇಶವಾಹಕಗಳು ಎಂದು ಇಲ್ಲಿನ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣದಿಂದ,ಇದನ್ನು ‘ಸಮುದ್ರ ಸರ್ಪಗಳು’ ಎಂದು ಕರೆಯಲಾಗುತ್ತದೆ.

ಒಂದೊಮ್ಮೆ ಇವುಗಳು ಸಮುದ್ರದ ತೀರಕ್ಕೆ ಬಂದು ಸಾವನ್ನಪ್ಪಿದರೆ, ಇದಾದ ಕೆಲವೇ ದಿನಗಳಲ್ಲಿ ಭೂಕಂಪ ಅಥವಾ ಸುನಾಮಿ ಸಂಭವಿಸುತ್ತದೆ ಎಂದು ಇಲ್ಲಿನ ಜನರು ನಂಬಿದ್ದಾರೆ. ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳು ಇಲ್ಲ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.

‘ಜಪಾನ್ನಲ್ಲಿ ಈ ಹಿಂದೆ ಸುನಾಮಿ ಸಂಭವಿಸುವ ಕೆಲವು ದಿನಗಳು ಮುನ್ನ ಹತ್ತಕ್ಕೂ ಅಧಿಕ ಓರಾಮೀನುಗಳು ಸಮುದ್ರದಂಡೆಯಲ್ಲಿ ಸಿಕ್ಕಿತ್ತು’ ಎಂದು ‘ಕ್ಯೊಡೊ ನ್ಯೂಸ್’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.